Ration Card EKYC: ಪಡಿತರ ಚೀಟಿದಾರರು (Ration card holder) ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ (EKYC) ಮಾಡಿಸುವುದು ಕಡ್ಡಾಯವಾಗಿದ್ದು, ಆ.31 ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ (fair price shop) ಇ-ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.
ಹೌದು, ಮುಂಜಾನೆ 7 ರಿಂದ ರಾತ್ರಿ 9ರವರೆಗೆ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಬಹುದು. ಇದನ್ನು ಮಾಡಿಸಲು ಕೇವಲ 5 ದಿನ ಬಾಕಿ ಇದೆ. ಅಗಸ್ಟ್ 31, 2024 ರ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ. ಇನ್ನು ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಅವಿನ್ ಆರ್. ತಿಳಿಸಿದ್ದಾರೆ.
ಇ ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ಒಂದು ವೇಳೆ ಪಡಿತರದಾರರು ಈ-ಕೆವೈಸಿ ಅನ್ನು ಆಗಸ್ಟ 31ರೊಳಗೆ ಮಾಡಿಸದಿದ್ದರೆ ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿದ್ದು, ತಮ್ಮ ಪಡಿತರ ಹಂಚಿಕೆಯನ್ನು ಮುಂದಿನ ತಿಂಗಳುಗಳಿಂದ ಪಡೆಯಲು ಸಾಧ್ಯವಾಗದೇ ಹೋಗಬಹುದು. ಅಷ್ಟೇ ಅಲ್ಲ, ‘ಇ-ಕೆವೈಸಿ’ ಮಾಡಿಸದ ಸದಸ್ಯರ ಹೆಸರನ್ನ ರೇಷನ್ ಕಾರ್ಡ್‌ನಿಂದ ತೆಗೆಯಲಾಗುತ್ತದೆ.
ಬಿಪಿಎಲ್ ಕಾರ್ಡ್ ಅನ್ನು ಗೃಹಲಕ್ಷ್ಮಿ ಯೋಜನೆಗೆ ಮಾನದಂಡ ಮಾಡಲಾಗಿದ್ದು ಒಂದು ವೇಳೆ ಕಾರ್ಡ್ ಕೂಡ ರದ್ದಾದರೆ ಈ ಯೋಜನೆ ಸೌಲಭ್ಯ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಈ ಸಮಯದವನ್ನು ಸದುಪಯೋಗ ಪಡಿಸಿಕೊಂಡು ಈ ಕೆವೈಸಿ ಮಾಡಿಸಬೇಕಾದುದು ಅವಶ್ಯಕ.
ಇ ಕೆವೈಸಿ ಏಕೆ ಕಡ್ಡಾಯವಾಗಿದೆ?
ಇ ಕೆವೈಸಿ ಪ್ರಕ್ರಿಯೆ ಮೂಲಕ ಪಡಿತರ ಚೀಟಿದಾರರ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಹಾಗೂ ಹಗರಣ ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ, ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಇದ್ದರೆ & ಸರ್ಕಾರಿ ನೌಕರರು ಈ ಕಾರ್ಡ್ ಹೊಂದಿದ್ದರೆ ಅವರ ಕಾರ್ಡ್ ಗಳನ್ನು ಸರ್ಕಾರದ ನಿಯಮಾನುಸಾರ ರದ್ದು ಮಾಡಲಾಗುತ್ತದೆ. ಒಂದು ವೇಳೆ ಇ ಕೆವೈಸಿ ಆಗದಿದ್ದರೆ ಬಿಪಿಎಲ್ ಪಡಿತರ ಚೀಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ.
ರೇಷನ್ ಕಾರ್ಡ್’ಗೆ ಇ-ಕೆವೈಸಿ ಹೇಗೆ ಮಾಡಿಸಬೇಕು?
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸದ್ಯ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಸಹ ಪ್ರಮುಖವಾಗಿದೆ. ಆದರೆ, ಈಗ ರೇಷನ್ ಕಾರ್ಡ್‌ಗೆ ಇ-ಕೆವೈಸಿ ಸಂಕಷ್ಟ ಎದುರಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಕೂಡಲೇ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಇ-ಕೆವೈಸಿಯನ್ನು ಹೇಗೆ ಅಪ್ಡೇಟ್ ಮಾಡುವುದು ಹೇಗೆ ಮಾಡುವುದು ಎಂಬ ಮಾಹಿತಿ ಈ ನೋಡಿ.
ರೇಷನ್ ಕಾರ್ಡ್ ಇ ಕೆವೈಸಿ ಎಲ್ಲಿ ಮಾಡಿಸಬೇಕು?
ಈ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಹಾಗಾಗಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರು ಹಾಗೂ ಈ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರು ಖುದ್ದಾಗಿ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ ಕೆವೈಸಿ ಮಾಡಿಸಬಹುದಾಗಿದೆ. ಕೆಲವು ಕಡೆ ಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪ್ರದರ್ಶಿಸಲಾಗಿದೆ. ಅಲ್ಲದೆ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಕೊಳ್ಳಬಹುದು.
ಇ ಕೆವೈಸಿ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವ ವಿಧಾನ
- ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ https://ahara.kar.nic.in/ ಹೋಗಿ ನಿಮ್ಮ ಜಿಲ್ಲೆಯ ಡಿವಿಜನ್ ಲಿಂಕ್ ಸೆಲೆಕ್ಟ್ ಮಾಡಬೇಕು.
- ನಂತರ ಪಡಿತರ ಚೀಟಿ ವಿವರ ಮೇಲೆ ಕ್ಲಿಕ್ ಮಾಡಿ.
- ನಂತರ ವಿಥೌಟ್ ಒಟಿಪಿ ಸೆಲೆಕ್ಟ್ ಮಾಡಿ ನಿಮ್ಮ ಆರ್ ಸಿ ನಂಬರ್ ನಮೂದಿಸಿ.
- ಇಲ್ಲಿ ನಿಮ್ಮ ರೇಷನ್ ಕಾರ್ಡ್ ನ ಬಗ್ಗೆ ಮಾಹಿತಿ ತೋರಿಸುತ್ತದೆ.
- ಅದೇ ಪರದೆ ಮೇಲೆ ಇ ಕೆವೈಸಿ ರಿಮೇನಿಂಗ್ ಜಾಗದಲ್ಲಿ ಮನೆಯ ಸದಸ್ಯರ ಕೆವೈಸಿ ಆಗಿದ್ದರೆ done ಎಂದು ತೋರಿಸುತ್ತದೆ.
- ಒಂದು ವೇಳೆ eKyc Remaining ಕಾಲಂನಲ್ಲಿ 1 ಎಂದು ತೋರಿಸಿದರೆ ಒಬ್ಬರ ಕೆವೈಸಿ ಬಾಕಿ ಉಳಿದಿದೆ ಎಂದರ್ಥ.
https://vijayaprabha.com/actress-namitha-at-madurai-meenakshi-temple/