ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆಎಸ್ ಆರ್ ಟಿಸಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊರಗುತ್ತಿಗೆ ಆಧಾರದಲ್ಲಿ 1,260 ಚಾಲಕರ ನೇಮಕಕ್ಕೆ ಮುಂದಾಗಿದೆ.
ಚಾಲಕರ ಕೊರತೆ ಹಿನ್ನಲೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲು ಕೆಎಸ್ ಆರ್ ಟಿಸಿ ಪ್ರಕ್ರಿಯೆ ಆರಂಭಿಸಿದ್ದು, ಈ ನಡುವೆ ಹೊರಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿಗೂ ಮುಂದಾಗಿದೆ.
ಕಳೆದ ವರ್ಷ ಕೆಎಸ್ ಆರ್ ಟಿಸಿ 1,700 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ 2,200 ಚಾಲಕ ಕಂ ನಿರ್ವಾಹಕರ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿ ಅಂತಿಮ ಹಂತದಲ್ಲಿದೆ. ಆದರೂ, ಹೊಸದಾಗಿ 1,260 ಹೊರಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲು ಸಜ್ಜಾಗಿದೆ.