ಕರ್ನಾಟಕ ಸರ್ಕಾರಿ ಶಾಲೆಯ ಕ್ರೀಡಾ ಕೂಟದ ಸರ್ಟಿಫಿಕೇಟ್ ಮೇಲೆ ಏಸು, ಮೇರಿಯ ಚಿತ್ರ !

ಶಿಕ್ಷಣ ಇಲಾಖೆಯು ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಆಧಾರಕರ ಚಿತ್ರವನ್ನು ಬಳಸುವ ಮೂಲಕ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ…

ಶಿಕ್ಷಣ ಇಲಾಖೆಯು ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಆಧಾರಕರ ಚಿತ್ರವನ್ನು ಬಳಸುವ ಮೂಲಕ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿತರಿಸಲಾದ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋಗಳನ್ನು ಮುದ್ರಿಸಲಾಗಿದ್ದು, ಇದು ಹಿಂದೂ ವಿರೋಧಿ ನಡೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಕಿಡಿ

Vijayaprabha Mobile App free

ಶಾಲೆಗಳ ಮುಖ್ಯದ್ವಾರದಲ್ಲಿ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ” ಎಂಬ ಸಾಲು ಬರೆಯುವುದು ಕೋಮುವಾದ, ಶಾಲಾ ಕಾಲೇಜುಗಳ ಆವರಣದಲ್ಲಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಕೋಮುವಾದ. ಆದರೆ ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗು ಮೇರಿ ಫೋಟೋ ಹಾಕುವುದು ಮಾತ್ರ ಜಾತ್ಯತೀತ!

ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ನಿಜವಾದ ಜಾತ್ಯತೀತತೆ. ಕಾಂಗ್ರೆಸ್ ಪಕ್ಷಕ್ಕೆ ಜಾತ್ಯತೀತತೆ ಎಂಬುದು ಹಿಂದೂ ಧರ್ಮವನ್ನ ವಿರೋಧಿಸಲು, ಹಿಂದೂಗಳನ್ನ ದ್ವೇಷಿಸಲು ಇರುವ ಒಂದು ಮುಖವಾಡವೇ ಹೊರತು, ಮತ್ತೇನು ಅಲ್ಲ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ಶೀಘ್ರದಲ್ಲೆ ತಕ್ಕ ಪಾಠ ಕಲಿಸುತ್ತಾರೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.