ವಿಮಾನ ನಿಲ್ದಾಣದಲ್ಲಿ ಉದ್ಯೋಗ ಮಾಡಬಯಸುವವರಿಗೆ, ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್(Airport Jobs 2024) ನಲ್ಲಿ ವಿವಿಧ 208 ಒಟ್ಟು ಹುದ್ದೆಗಳು ಖಾಲಿ ಇವೆ.
AIASL Recruitment 2024 – ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ನ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಗಳ ವಿವರ ಹಾಗೂ ಇತರೆ ನೇಮಕಾತಿ ವಿವರವನ್ನು ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವವರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.
AIASL Recruitment details-ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :
ಒಟ್ಟು 208 ಹುದ್ದೆಗಳು ಖಾಲಿ ಇದ್ದು, ಖಾಲಿ ಹುದ್ದೆಗಳ ವಿವರವು ಹೀಗಿದೆ –
• ಹ್ಯಾಂಡಿ ಮೆನ್ / ಹ್ಯಾಂಡಿ ವುಮೆನ್ – 201 ಹುದ್ದೆಗಳು
• ಯುಟಿಲಿಟಿ ಏಜೆಂಟ್ / ರಾಂಪ್ ಡ್ರೈವರ್ – 04 ಹುದ್ದೆಗಳು
• ರಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ – 03 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು –
ರಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೋಮಾ ಅಥವಾ ಐಟಿಐ ಮುಗಿಸಿರಬೇಕು. ಇನ್ನುಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು.
Age limit and salary-ವಯೋಮಿತಿ ಹಾಗೂ ವೇತನ:
ವಿಮಾನ ನಿಲ್ದಾಣದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಗರಿಷ್ಠ 28 ವರ್ಷದ ಒಳಗಿರಬೇಕು. ಮೀಸಲಾತಿ ವರ್ಗದಲ್ಲಿ ಬರುವವರಿಗೆ ಗರಿಷ್ಠ ವಯಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತಿರುತ್ತದೆ.
• ಹ್ಯಾಂಡಿ ಮೆನ್ / ಹ್ಯಾಂಡಿ ವುಮೆನ್ – 18,840ರೂ.
• ಯುಟಿಲಿಟಿ ಏಜೆಂಟ್ / ರಾಂಪ್ ಡ್ರೈವರ್ – 21,270ರೂ.
• ರಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ – 24,960ರೂ.
ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಕ್ಟೋಬರ್ 5 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಕೆಳಗೆ ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ಭಾಗವಹಿಸಬೇಕು. ಇಲ್ಲಿ ಅಭ್ಯರ್ಥಿಗಳಿಗೆ ಟ್ರೇಡ್ ಟೆಸ್ಟ್, ದೈಹಿಕ ಸಹಿಷ್ಣುತೆ ಪರೀಕ್ಷೆ ಹಾಗೂ ಸಂದರ್ಶ ನೀಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
• ಸಂದರ್ಶನ ನಡೆಯುವ ವಿಳಾಸ : Sri Jagannath Auditorium,Near Vengoor Durga Devi Temple,
Vengoor, Angamaly, Ernakulam, KeralaPin – 683572.
• ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ : https://aiasl.in/
• ಅಧಿಸೂಚನೆ – Download Now