ದೇಶದ ಸಾರ್ವಜನಿಕ ವಲಯಗಳಲ್ಲಿ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಕೆನರಾ ಬ್ಯಾಂಕಿನಲ್ಲಿ ಪದವಿ ಮುಗಿಸಿದ(Canara Bank Recruitment) ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಭಾರತ ದೇಶಾದ್ಯಂತ ಒಟ್ಟು 3000 ಜನರಿಗೆ ಈ ಒಂದು ಅವಕಾಶ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಅದರಲ್ಲಿ 600 ಸ್ಥಾನಗಳನ್ನು ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯು ಕೆಳಗಿನ ಭಾಗದಲ್ಲಿದೆ.
Canara Bank Apprenticeship Recruitment 2024- ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ಉದ್ಯೋಗ ತರಬೇತಿಯೊಂದಿಗೆ ಮಾಸಿಕ ಸ್ಟೈಪಂಡ್ ಕೂಡ ನೀಡಲಾಗುವುದು.
Eligibility- ಅರ್ಹತೆಗಳು:
ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 12ನೇ ತರಗತಿಯ ಅಥವಾ ಡಿಪ್ಲೋಮಾದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಗುವುದು.
Age limit- ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 20ರಿಂದ ಗರಿಷ್ಠ 28 ವರ್ಷದ ಒಳಗಿರಬೇಕು.
Stipend details- ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಸ್ಟೈಪೆಂಡ್ ವಿವರ:
ಅಂತಿಮ ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಒಟ್ಟು ರೂ.15000 ನೀಡಲಾಗುತ್ತದೆ.
Application fee-ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಉಳಿದ ಅಭ್ಯರ್ಥಿಗಳಿಗೆ 500 ರೂಪಾಯಿ ನಿಗದಿಪಡಿಸಿದೆ.
Application last date-ಕೊನೆಯ ದಿನಾಂಕ:
ಅರ್ಹರಿರುವ ಅಭ್ಯರ್ಥಿಗಳು ಅಕ್ಟೋಬರ್ 4, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
Important website links-ನೇಮಕಾತಿಯ ಪ್ರಮುಖ ಲಿಂಕುಗಳು:
• ಅಧಿಕೃತ ಜಾಲತಾಣ – https://www.canarabank.com/
• ಅಧಿಸೂಚನೆ – Download Now