ಕೆನರಾ ಬ್ಯಾಂಕ್ ನಲ್ಲಿ 3000 ಹುದ್ದೆಗಳ ನೇಮಕಾತಿ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ದೇಶದ ಸಾರ್ವಜನಿಕ ವಲಯಗಳಲ್ಲಿ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಕೆನರಾ ಬ್ಯಾಂಕಿನಲ್ಲಿ ಪದವಿ ಮುಗಿಸಿದ(Canara Bank Recruitment) ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಭಾರತ ದೇಶಾದ್ಯಂತ ಒಟ್ಟು 3000 ಜನರಿಗೆ ಈ ಒಂದು…

Canara Bank

ದೇಶದ ಸಾರ್ವಜನಿಕ ವಲಯಗಳಲ್ಲಿ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತ ಕೆನರಾ ಬ್ಯಾಂಕಿನಲ್ಲಿ ಪದವಿ ಮುಗಿಸಿದ(Canara Bank Recruitment) ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಭಾರತ ದೇಶಾದ್ಯಂತ ಒಟ್ಟು 3000 ಜನರಿಗೆ ಈ ಒಂದು ಅವಕಾಶ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಅದರಲ್ಲಿ 600 ಸ್ಥಾನಗಳನ್ನು ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯು ಕೆಳಗಿನ ಭಾಗದಲ್ಲಿದೆ.

Canara Bank Apprenticeship Recruitment 2024- ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ಉದ್ಯೋಗ ತರಬೇತಿಯೊಂದಿಗೆ ಮಾಸಿಕ ಸ್ಟೈಪಂಡ್ ಕೂಡ ನೀಡಲಾಗುವುದು.

Vijayaprabha Mobile App free

Eligibility- ಅರ್ಹತೆಗಳು: 

ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 12ನೇ ತರಗತಿಯ ಅಥವಾ ಡಿಪ್ಲೋಮಾದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಗುವುದು.

Age limit- ವಯೋಮಿತಿ: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 20ರಿಂದ ಗರಿಷ್ಠ 28 ವರ್ಷದ ಒಳಗಿರಬೇಕು.

Stipend details- ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಸ್ಟೈಪೆಂಡ್ ವಿವರ: 

ಅಂತಿಮ ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆಯಾಗುವ  ಅಭ್ಯರ್ಥಿಗಳಿಗೆ ಮಾಸಿಕ ಒಟ್ಟು ರೂ.15000 ನೀಡಲಾಗುತ್ತದೆ.

Application fee-ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ: 

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಉಳಿದ ಅಭ್ಯರ್ಥಿಗಳಿಗೆ 500 ರೂಪಾಯಿ ನಿಗದಿಪಡಿಸಿದೆ.

Application last date-ಕೊನೆಯ ದಿನಾಂಕ: 

ಅರ್ಹರಿರುವ  ಅಭ್ಯರ್ಥಿಗಳು ಅಕ್ಟೋಬರ್ 4, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.

Important website links-ನೇಮಕಾತಿಯ ಪ್ರಮುಖ ಲಿಂಕುಗಳು: 

• ಅಧಿಕೃತ ಜಾಲತಾಣ – https://www.canarabank.com/

• ಅಧಿಸೂಚನೆ – Download Now

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.