ಉದ್ಯೋಗದ ನಿರೀಕ್ಷೆಯಲ್ಲಿರುವವವರಿಗೆ ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ ಹೌದು ಬೆಂಗಳೂರಿನ KC ಜನರಲ್ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ, ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ: ಮಲ್ಲೇಶ್ವರಂನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆ
ಹುದ್ದೆಗಳ ಸಂಖ್ಯೆ: 13
ಕೆಲಸದ ಸ್ಥಳ: ಬೆಂಗಳೂರು
ವಿದ್ಯಾರ್ಹತೆ: SSLC, PUC, ಡಿಪ್ಲೊಮಾ, BPharm, ಕಾನೂನು, BE, BTech, BCA.
ನೀವು ಬೇಸಿಕ್ ಕಂಪ್ಯೂಟರ್ ಕೌಶಲ್ಯಗಳನ್ನು ಸಹ ಹೊಂದಿರಬೇಕು.
ವಯೋಮಿತಿ : 40 ವರ್ಷ ಒಳಗಿನವರು ಅರೆಜೀ ಹಾಕಬಹುದು
ಸಂಬಳ: ಆ ಹುದ್ದೆಗಳಿಗೆ ಅನುಸಾರ ಸಂಬಳ ಇರುತ್ತದೆ12 ಸಾವಿರದಿಂದ 25 ಸಾವಿರವರೆಗೆ ಸಂಬಳ ಇದೆ
ಆಯ್ಕೆ ವಿಧಾನ ಹೇಗಿರತ್ತೆ?ಈ ಹುದ್ದೆಗೆ ಆಯ್ಕೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮೂಲ ದಾಖಲೆಗಳೊಂದಿಗೆ ಸೆಪ್ಟೆಂಬರ್ 5 ರಂದು ಸಂದರ್ಶನಕ್ಕೆ ಹಾಜರಾಗಬಹುದು. ಆರೋಗ್ಯ ರಕ್ಷಾ ಸಮಿತಿಯ ಗೌರವಧನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳ:DNB ಸೆಮಿನಾರ್ ಹಾಲ್, DNB ಬ್ಲಾಕ್, KC ಸರ್ಕಾರಿ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು.
ಅಗತ್ಯವಿರುವ ದಾಖಲೆಗಳು: 2 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು, ಯಾವುದೇ ID ಪುರಾವೆ, 10 ನೇ ತರಗತಿಯ ಮಾರ್ಕ್ ಶೀಟ್, ಎಲ್ಲಾ ಸಂಬಂಧಿತ ಮಾರ್ಕ್ ಶೀಟ್‌ಗಳು.
ನೀವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಓದಲು ಮತ್ತು ಬರೆಯಲು ತಿಳಿದಿರಬೇಕು.
ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಮಾಹಿತಿಯನ್ನು ಸಹಾಯಕ ಆಡಳಿತಾಧಿಕಾರಿ, ಆಡಳಿತ ಕಚೇರಿ, ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು ಇವರನ್ನು ಸಂಪರ್ಕಿಸಬೇಕು.