Indira Canteen | ಬಡಜನರ 5 ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟೀನ್​ಗಳಿಗೆ ಸಂಕಷ್ಟ!?

Indira Canteen : ರಾಜ್ಯದಲ್ಲಿ ಬಡವರಿಗಾಗಿ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು.  2013ರಿಂದ 2018ರ ತನಕ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಸರ್ಕಾರ ತಮಿಳುನಾಡಿನ…

Indira Canteen

Indira Canteen : ರಾಜ್ಯದಲ್ಲಿ ಬಡವರಿಗಾಗಿ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. 

2013ರಿಂದ 2018ರ ತನಕ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಸರ್ಕಾರ ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ಗಳ ರೀತಿಯಲ್ಲಿ 2017ರಲ್ಲಿ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳ 175 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ಆರಂಭಿಸಿದ್ದರು. ರಾಜ್ಯಾದ್ಯಂತ ಹಲವು ಜಿಲ್ಲಾ ಕೇಂದ್ರ, ಪಟ್ಟಣಗಳಲ್ಲೂ ಇಂದಿರಾ ಕ್ಯಾಂಟಿನ್‌ಗಳು ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ:ಯುನಿಟ್ ಲಿಂಕ್ಡ್ ವಿಮಾ ಯೋಜನೆ ವಿಧಗಳು, ತೆರಿಗೆ ಪ್ರಯೋಜನಗಳು

Vijayaprabha Mobile App free

ಅನುದಾನದ ಕೊರತೆಯಿಂದ ಇಂದಿರಾ ಕ್ಯಾಂಟೀನ್ (Indira Canteen)​ ಯೋಜನೆಗೆ ಗ್ರಹಣ

Indira Canteen vijayaprabha news

ಬೆಂಗಳೂರಿನಲ್ಲಿ ಒಟ್ಟು 198 ಇಂದಿರಾ ಕ್ಯಾಂಟೀನ್​ಗಳನ್ನ​ ನಿರ್ಮಾಣ ಮಾಡಲಾಗಿತ್ತು. ಆದರೆ ಅನುದಾನದ ಕೊರತೆ ಹಾಗೂ ಬಿಬಿಎಂಪಿ ಕಳಪೆ ನಿರ್ವಹಣೆ ಮಾಡಿದ್ದು, ಇಂದಿರಾ ಕ್ಯಾಂಟೀನ್​ಗಳಿಗೆ ಸಂಕಷ್ಟ ಬಂದಿದೆ. ಜೊತೆಗೆ ಇಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರೋದಾಗಿ ಆರೋಪ ಕೂಡಾ ಇದೆ. ಮಾರತ್ತಹಳ್ಳಿ, ಪದ್ಮನಾಭನಗದಲ್ಲಿ ಇಂದಿರಾ ಕ್ಯಾಂಟೀನ್​ ಬಾಗಿಲು ಕ್ಲೋಸ್ ಆಗಿದೆ. 50ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್​ಗಳಿಗೆ ದುರಸ್ತಿ ಕಾರ್ಯ ಬೇಕಿದೆ. ಸಿಎಂ ಅವರ ಕನಸಿನ ಇಂದಿರಾ ಕ್ಯಾಂಟೀನ್​ ಯೋಜನೆಗೆ ಕಾಯಕಲ್ಪ ಬೇಕಿದೆ.

ಇದನ್ನೂ ಓದಿ: ಮಹಿಳೆಯರಿಗಾಗಿ ಸರ್ಕಾರದ ತಾಯಿ ಭಾಗ್ಯ ಯೋಜನೆ; ಸೌಲಭ್ಯಗಳು, ಅರ್ಜಿ ಸಲ್ಲಿಕೆ

ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಮೆನು ಬಿಡುಗಡೆ ಮಾಡಿದ್ದ ಸಿಎಂ

ಕಾಂಗ್ರೆಸ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಅವರು ಹೊಸ ಮೆನು ಬಿಡುಗಡೆ ಮಾಡಿದ್ದರು. ಅದರಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ-ಸಾಂಬಾರ್​, ಇಡ್ಲಿ-ಚಟ್ನಿ, ವೆಜ್​ ಪುಲಾವ್​-ರಾಯಿತಾ, ಖಾರಾಬಾತ್​-ಚಟ್ನಿ, ಚೌಚೌಬಾತ್​- ಚಟ್ನಿ, ಮಂಗಳೂರು ಬನ್ಸ್​​, ಬಿಸಿಬೇಳೆ ಬಾತ್​​-ಬೂಂದಿ, ಪೊಂಗಲ್​-ಚಟ್ನಿ ನೀಡಲಾಗುತ್ತಿದ್ದು, ಪ್ಲೇಟ್​ಗೆ 5 ರೂ, ಬೆಲೆ ಇದೆ. ಮಧ್ಯಾಹ್ನದ ಊಟಕ್ಕೆ ಅನ್ನ-ತರಕಾರಿ ಸಂಬಾರು, ಖೀರು, ಚಪಾತಿ-ಸಾಗು, ನೀಡಲಾಗುತ್ತಿದ್ದು, ಪ್ಲೇಟ್​ಗೆ 10 ರೂ, ಬೆಲೆ ಇದೆ.

ಇಂದಿರಾ ಕ್ಯಾಂಟೀನ್ ನಲ್ಲಿ​ ಆಯಾ ಭಾಗದ ಆಹಾರ ಪದ್ಧತಿಯಂತೆ ಊಟ ನೀಡಲು ಯೋಜನೆ

ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 197 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಡ ಜನರು ಹಸಿವಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆಯಲಾಗಿದ್ದು, ಆದರೆ ಎಲ್ಲಾ ಕ್ಯಾಂಟೀನ್‌ಗಳಲ್ಲಿಯೂ ಕೂಡಾ ಒಂದೇ ರೀತಿಯ ಮೆನು ಇದೆ. ಆದರೆ ಈಗ ಆಯಾಯ ಜಿಲ್ಲೆಗಳಿಗೆ ಸೂಕ್ತ ಎನಿಸುವ ಸ್ಥಳೀಯ ಆಹಾರ ಮೆನುವಿಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದ್ದು, ಈಗಾಗಲೇ ಅಸ್ಥಿತ್ವದಲ್ಲಿರುವ ಇಂದಿರಾ ಕ್ಯಾಂಟೀನ್​ಗೂ ಟೆಂಡರ್ ಕರೆಯಲಾಗುವುದು ಎಂದು ಇತ್ತೀಚಿಗೆ ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Fastest internet | ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಸ್ಪೀಡ್ ಹೊಂದಿರುವ ರಾಷ್ಟ್ರಗಳು

ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ವಸ್ತು ಬಳಕೆ?

ಬಡಜನರ ಹಸಿವು ನೀಗಿಸುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ 5 ರೂ, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಕೇವಲ 10 ರೂಗಳಿಗೆ ನೀಡುತ್ತಿರುವ ಕಾರಣ ನಿತ್ಯ ಕ್ಯಾಂಟೀನ್‌ನಲ್ಲಿ ನೂರಾರು ಮಂದಿ ಊಟ ಮಾಡುತ್ತಿದ್ದಾರೆ. ಆದರೆ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಳಪೆ ಗುಣಮಟ್ಟದ, ಅವಧಿ ಮುಗಿದ ಅಕ್ಕಿ, ಎಣ್ಣೆ ಮತ್ತಿತರ ಸಾಮಗ್ರಿಗಳನ್ನು ಬಳಸಿ ಅಡುಗೆ ತಯಾರಿಸುತ್ತಿರುವುದು ಕಂಡು ಬಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply