PM Awas Yojana : ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗಿಯೇ ಉಳಿದುಬಿಡುತ್ತದೆ.
ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿದ್ದು, ಜನಸಾಮಾನ್ಯರ ಸ್ವಂತ ಮನೆ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವಾಸ ಯೋಜನೆ ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.
ಇದನ್ನೂ ಓದಿ: ವಸತಿ ರಹಿತರಿಗೆ ಗುಡ್ ನ್ಯೂಸ್ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಯಾರಿಗೆ ಲಾಭ? ಅರ್ಜಿ ಸಲ್ಲಿಸಲು ಅರ್ಹತೆ, ದಾಖಲೆಗಳು
ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ ವಿಸ್ತರಣೆ!
ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಒದಗಿಸಲು ಜಾರಿಗೆ ಬಂದ ಯೋಜನೆ. ಈ ಯೋಜನೆಯನ್ನು 1985 ರಲ್ಲಿ ” ಇಂದಿರಾ ಆವಾಸ್ ಯೋಜನೆ ” ಎಂದು ಪ್ರಾರಂಭಿಸಲಾಯಿತು. ನಂತರ ಇದರ ಹೆಸರನ್ನು ಬದಲಿಸಲಾಯಿತು.
PMAYG ಮಿಷನ್ ಅನ್ನು ಈಗ 2024 ರವರೆಗೆ ವಿಸ್ತರಿಸಲಾಗಿದೆ. ಇದು ಲಕ್ಷಾಂತರ ಹಳ್ಳಿಯ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆ ಎಲ್ಲಾ ಅರ್ಹ ಗ್ರಾಮೀಣ ಕುಟುಂಬಗಳಿಗೆ ನೀರು, ನೈರ್ಮಲ್ಯ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.
ಇದನ್ನೂ ಓದಿ: ಅನರ್ಹರ BPL card ಮಾತ್ರ ರದ್ದು; ಅರ್ಹರಿಗೆ ರೇಷನ್ ಕಾರ್ಡ್ ರದ್ದು ಮಾಡೋಲ್ಲ: ಸಿಎಂ ಸಿದ್ದರಾಮಯ್ಯ
PM Awas Yojana : ಗ್ರಾಮೀಣಕ್ಕಾಗಿ ‘ಆವಾಸ್’ ಮೊಬೈಲ್ ಅಪ್ಲಿಕೇಶನ್
ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸುವಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದ್ದು, ಕೇಂದ್ರ ಸರ್ಕಾರವು ‘ಆವಾಸ್’ ಎಂಬ ಮೊಬೈಲ್ ಅಪ್ಲಿಕೇಶನ್ ಸಹ ಹೊರತಂದಿದೆ.
ನೀವು PMAY ಯೋಜನೆಯ ಅನುಷ್ಠಾನದ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸಬ್ಸಿಡಿ ಸ್ಥಿತಿಯನ್ನು ಸಹ ಪರಿಶೀಲಿಸಬಹುದು. ತಪಾಸಣೆ ಲಾಗಿನ್, ಫಲಾನುಭವಿ ಲಾಗಿನ್, FTO ಟ್ರ್ಯಾಕಿಂಗ್, ಫಲಾನುಭವಿ ಹುಡುಕಾಟದಂತಹ ಚಟುವಟಿಕೆಗಳನ್ನು ಆವಾಸ್ ಅಪ್ಲಿಕೇಶನ್ ಬಳಸಿ ನಿರ್ವಹಿಸಬಹುದು.
ಇದನ್ನೂ ಓದಿ: Ration Card EKYC | ರೇಷನ್ ಕಾರ್ಡ್ ರದ್ದಾಗುತ್ತೆ; ಡಿಸೆಂಬರ್ 1ರೊಳಗೆ ಇ-ಕೆವೈಸಿ ಮಾಡಿಸಿ
PM Awas Yojana ಫಲಾನುಭವಿಗಳಾಗಲು ಇವರು ಅನರ್ಹರು!
2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024ರ ಡಿಸೆಂಬರ್ವರೆಗೂ ವಿಸ್ತರಣೆ ಆಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕಗೊಳಿಸಲಾಗಿದೆ. ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳನ್ನೂ ಕೂಡಾ ಈ ವೇಳೆ ಬದಲಿಸಲಾಗಿದ್ದು, ಮೋಟಾರು ವಾಹನ, ಎರಡಕ್ಕಿಂತ ಹೆಚ್ಚು ಬೈಕ್, ಸ್ಕೋಟರ್ ಮತ್ತು ಕೃಷಿ ಯಂತ್ರೋಪಕರಣವನ್ನು ಹೊಂದಿದವರು. ರೂ 50,000 ಹಾಗು ಅದಕ್ಕಿಂತ ಹೆಚ್ಚು ಲಿಮಿಟ್ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು ಹಾಗು ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.