Milk Rates Increase: ನಂದಿನಿ ಹಾಲಿನ ದರ ಏರಿಕೆಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಲಿನ ದರ ಏರಿಕೆಯಿಂದ ಎಲ್ಲರಿಗೂ ದೊಡ್ಡ ಹೊರೆಯಾಗುತ್ತದೆ. ಇದರಿಂದ ಬಹಳ ಬೇಸರವಾಗಿದೆ ಎಂದು ಮಾಲೀಕ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
ಸದ್ಯದಲ್ಲೇ ಚರ್ಚಿಸಿ ಟೀ-ಕಾಫಿ ದರ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಲೀಟರ್ ಹಾಲಿನ ದರವನ್ನು 2 ರೂ. ಏರಿಕೆ ಮಾಡಿದೆ.
ಹಾಲಿನ ದರ ಏರಿಕೆ.. ಕೆಎಂಎಫ್ ಸಮರ್ಥನೆ
‘ನಂದಿನಿ ಹಾಲಿನ ಬೆಲೆಯಲ್ಲಿ ಒಂದು ಪೈಸೆಯೂ ಜಾಸ್ತಿ ಮಾಡುತ್ತಿಲ್ಲ. ಹೆಚ್ಚುವರಿಯಾಗಿ 50 ML ಹಾಲನ್ನು ಪ್ರತಿ ಪ್ಯಾಕೆಟ್ನಲ್ಲಿ ನೀಡುತ್ತಿದ್ದೇವೆ. ಅದಕ್ಕೆ 2 ರೂ. ಪಡೆಯುತ್ತಿದ್ದೇವೆ ಅಷ್ಟೇ. ಇದರಿಂದ ಗ್ರಾಹಕರಿಗೆ ಹೊರೆ ಆಗುವುದಿಲ್ಲ” ಎಂದು KMF ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.
`ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ರೈತರು ಎಷ್ಟೇ ತಂದರೂ ನಾವು ಖರೀದಿಸುತ್ತಿದ್ದೇವೆ. ಪ್ಯಾಕೆಟ್ ಹಾಲಿನಲ್ಲಿ ಲಾಸ್ ಆಗುತ್ತದೆ. ಆದರೆ ಹಾಲಿನ ಉತ್ಪನ್ನಗಳಲ್ಲಿ ಲಾಭವಿದೆ’ ಎಂದಿದ್ದಾರೆ.
ಇದನ್ನು ಓದಿ: ನಂದಿನಿ ಹಾಲು ದರ ಏರಿಕೆ ಶಾಕ್; ಅರ್ಧ ಲೀಟರ್ಗೂ 2ರೂ. ಹೆಚ್ಚಳ, ಒಂದು ಲೀಟರ್ಗೂ 2ರೂ. ಹೆಚ್ಚಳ!