ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇದೀಗ ಕಳಪೆ ಗುಣಮಟ್ಟದ ತಿಂಡಿ, ಆಹಾರ ನೀಡುವ ಹೋಟೆಲ್ಗಳ ವಿರುದ್ಧ ಚಾಟಿ ಬೀಸಲು ಆರಂಭಿಸಿದೆ. ಕಳಪೆ ಗಣಮಟ್ಟದ ಆಹಾರ, ತಿಂಡಿ ಮಾರಟ ಹಾಗೂ ಸ್ವಚ್ಛತೆ ಕಾಪಾಡದ ಆರೋಪದಲ್ಲಿ ಹೋಟೆಲ್ಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿದ್ದು ಪ್ರಯೋಗಾಲಯಕ್ಕೆ ಕಳುಹಿಸಿದೆ.
ಬಸ್ ನಿಲ್ದಾಣ ಹಾಗೂ ಬೀದಿ ಬದಿಯ ಹೋಟೆಲ್ಗಳ ಆಹಾರದ ಸ್ಯಾಂಪಲ್ಸ್ ಸಂಗ್ರಹಿಸಲು ಆಹಾರ ಇಲಾಖೆ ಮುಂದಾಗಿದೆ. ಬಸ್ ನಿಲ್ದಾಣ ಹಾಗೂ ಬೀದಿ ಬದಿಯ ಹೋಟೆಲ್ಗಳಲ್ಲಿ ತಿಂಡಿ ಆಹಾರ ಸೇರಿದಂತೆ ಹೋಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಸ್ವಚ್ಛತೆ ಕೊರತೆಯಿಂದ ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ವೆತ್ಯರಿಕ್ತ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬಂದ ಕಾರಣ ಅಂಥ ಹೋಟೆಲ್ಗಳಿಂದ ಆಹಾರಗಳ ಮಾದರಿ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ಬೆಂಗಳೂರಿನ ವಿವಿಧ ಭಾಗಗಳ 760 ಹೋಟೆಲ್ಗಳಿಂದ ಸ್ಯಾಂಪಲ್ಸ್ ಕಲೆ ಹಾಕಿದ್ದು ಈ ಪೈಕಿ ಸ್ವಚ್ಛತೆ ಇಲ್ಲದ 128 ಹೋಟೆಲ್ಗಳಿಗೆ ನೋಟಿಸ್ ನೀಡಲಾಗಿದೆ. ಅಸುರಕ್ಷಿತ ಆಹಾರ ಹಾಗೂ ಸ್ವಚ್ಛತೆ ಕಾಪಾಡದ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಇದರ ಬಳಿಕ ಈಗ ಎರಡನೇ ಹಂತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬೀದಿ ಬದಿಯ ಹೋಟೆಲ್ಗಳ ಆಹಾರದ ಸ್ಯಾಂಪಲ್ಸ್ ಪಡೆಯಲಾಗುತ್ತಿದೆ. ಸ್ಚಚ್ಛತೆಯ ಆಧಾರದ ಮೇಲೆ ಕ್ರಮವಹಿಸಲು ಮುಂದಾಗಿದೆ. ಸ್ವಚ್ಛತೆ ಕೊರತೆ ಹಾಗೂ ಅಸುರಕ್ಷಿತ ಆಹಾರ ನೀಡುವ ಹೋಟೆಲ್ಗಳಿಗೆ ನೋಟಿಸ್ ನೀಡಲು ಮುಂದಾಗಿದ್ದೇವೆ ಎಂದು ಆಯುಕ್ತ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.