Heart Attack: ಎಚ್ಚರ… ಈ ಲಕ್ಷಣ ಕಂಡು ಬಂದ್ರೆ ತಕ್ಷಣ ಡಾಕ್ಟರ್ ಭೇಟಿ ಮಾಡಿ!

ಇತ್ತೀಚಿನ ದಿನಗಳಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ. ಹೀಗಾಗಿ ವಯಸ್ಸಿನ ಬಗ್ಗೆ ಯೋಚಿಸದೇ ಈಗ ಹೃದಯವನ್ನು ಕಾಳಜಿ ಮಾಡುವುದು ಮುಖ್ಯವಾಗಿದೆ. ಯಾವುದೇ ರೋಗ ಆಗಲಿ ಬಂದ ಮೇಲೆ ಆರೈಕೆ ಮಾಡಿಕೊಳ್ಳುವುದಕ್ಕಿಂತ ಬರುವ ಮುನ್ನ ಎಚ್ಚರ ವಹಿಸುವುದು ಮುಖ್ಯ.

ಹೃದಯಾಘಾತ ಎಂದರೇನು?: ಹೃದಯಕ್ಕೆ ರಕ್ತ ಸಂಚಲನೆ ಹಠಾತ್ ಆಗಿ ಬ್ಲಾಕ್ ಆಗುತ್ತದೆ. ಇದರ ಪ್ರತಿಫಲವಾಗಿ ಹೃದಯ ಸ್ತಂಭನ ಉಂಟಾಗಿ ಬಳಿಕ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಇದನ್ನು ಹೃದಯಾಘಾತ ಎನ್ನುತ್ತಾರೆ.

ಹೃದಯಾಘಾತದ ಲಕ್ಷಣಗಳು: ಹೃದಯಾಘಾತವಾದಾಗ ಎಡ ಭಾಗದ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಆದರೆ ಎಲ್ಲರಿಗೂ ಇದೆ ರೀತಿ ಆಗುತ್ತದೆ ಅಂತಲ್ಲ. ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ, ಭುಜಗಳಲ್ಲಿ ನೋವು ಬರಬಹುದು. ಈ ರೀತಿಯ ನೋವು ಕೆಲ ದಿನಗಳ ಮುಂಚೆಯೇ ಕಂಡು ಬರುಬಹುದು ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ, ಅದು ನಮ್ಮ ಜೀವನಶೈಲಿಯ ಅಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜೀವನಶೈಲಿ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ಆರೋಗ್ಯ ಅಷ್ಟೇ ಉತ್ತಮವಾಗಿರುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಆಹ್ವಾನ ನೀಡದೇ ಬಂದು ಬಿಡುತ್ತವೆ ಹೀಗೆ ಒಬ್ಬರು ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದಿದ್ದಾರೆ.

Advertisement

ಹಾಗಾದರೆ ತಜ್ಞರು ವಿವರಿಸಿರುವ ಆ ಐದು ಸಾಮಾನ್ಯ ಚಿಹ್ನೆಗಳನ್ನು ನೋಡೋಣ ಬನ್ನಿ

* ಆತಂಕ ನಮ್ಮ ಕೆಲಸ, ವೇಳಾಪಟ್ಟಿ, ಜೀವನಶೈಲಿ ಎಲ್ಲವೂ ನೇರವಾಗಿ ನಮ್ಮ ಆತಂಕಕ್ಕೆ ಕಾರಣವಾಗಿದ್ದು, ಈ ಆತಂಕ ನಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆತಂಕ ಮತ್ತು ಹೃದಯರೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚಾಗಿ ಯಾರು ಒತ್ತಡ, ಆತಂಕ, ಖಿನ್ನತೆಯಿಂದಾಲೇ ಜೀವನ ನಡೆಸುತ್ತಾರೋ ಅಂಥವರಲ್ಲಿ ಈ ಹೃದ್ರೋಗದ ಅಪಾಯ ಹೆಚ್ಚು. ಬೆವರುವುದು ಯಾವುದಾದರೂ ದೈಹಿಕ ಕೆಲಸ ಮಾಡಿದರೆ ಸಹಜವಾಗಿ ಕೆಲವರು ಬೆವರುತ್ತಾರೆ. ಆದರೆ ಏನೂ ಮಾಡದೇ ಸುಖಾಸುಮ್ಮನೆ ಬೆವರಿದರೆ ಅದು ಸಾಮಾನ್ಯವಲ್ಲ. ಇದು ಭವಿಷ್ಯದ ಹಾರ್ಟ್‌ ಅಟ್ಯಾಕ್‌ ಸಂಕೇತ ಎನ್ನುತ್ತಾರೆ ದೀಪಕ್ ಭಟ್‌.‌ ಬೇಗ ಬೆವರುವುದು, ವ್ಯಕ್ತಿಯು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸದಿದ್ದಾಗಲೂ ಬೆವರುವುದು ಹೃದಯಾಘಾತದ ಮೊದಲ ಚಿಹ್ನೆಗಳಲ್ಲಿ ಒಂದು ಎಂದು ಅವರು ಎಚ್ಚರಿಸುತ್ತಾರೆ

ಕಾಲು ನೋವು:- ಕಾಲು ನೋವು ಅಂದರೆ ವಯಸ್ಸಾಗ್ತಿದೆ ಹೀಗಾಗಿ ಇದೆಲ್ಲಾ ಸಹಜ ಎಂದು ಭಾವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಡಾ. ದೀಪಕ್‌ ಈ ಲಕ್ಷಣವನ್ನು ಹೃದ್ರೋಗದ ಅನಿರೀಕ್ಷಿತ ಸಿಗ್ನಲ್ ಎಂದಿದ್ದಾರೆ. ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ನೋವು ವಾಸ್ತವವಾಗಿ ಭವಿಷ್ಯದ ಹೃದಯಘಾತದ ಪ್ರಮುಖ ಲಕ್ಷಣಗಳಾಗಿವೆ ಎಂದಿದ್ದಾರೆ.

* ಆಯಾಸ ಕೆಲಸ ಮಾಡಿ ದಿನದ ಕೊನೆಯಲ್ಲಿ ದಣಿವಾಗುವುದು ಸಹಜ, ಆದರೆ ದಿನಂಪ್ರತಿ ಇದೇ ಆಯಾಸ, ಸುಸ್ತು ಇದ್ದರೆ ಇದಕ್ಕೆ ಬೇರೆಯದ್ದೇ ಕಾರಣವಿರುತ್ತದೆ. ಹೀಗೆ ಹೃದಯಘಾತದ ಅಪಾಯದ ಲಕ್ಷಣಗಳಲ್ಲಿ ಈ ಆಯಾಸ ಕೂಡ ಒಂದು ಎನ್ನುತ್ತಾರೆ ವೈದ್ಯರು.

* ಹೊಟ್ಟೆಯ ತೊಂದರೆಗಳು ಹೃದ್ರೋಗದಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡು ಬರುತ್ತವೆ. ಹೃದಯರಕ್ತನಾಳದ ಸ್ಥಿತಿಯು ಹದಗೆಟ್ಟಾಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಸಂಭವಿಸುತ್ತವೆ. ಇದು ಮೊದಲಿಗೆ ಸಾಮಾನು ಹೊಟ್ಟೆ ನೋವು ಎಂದೆನಿಸಿದರೂ ಈ ಲಕ್ಷಣ ಹಾರ್ಟ್‌ ಅಟ್ಯಾಕ್‌ಗೆ ನೇರವಾಗಿ ಸಂಬಂಧಿಸಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement