(Headache) ಬಹುತೇಕವಾಗಿ ತಲೆ ನೋವು ಬಂದ ತಕ್ಷಣ ಚಹಾ ಉತ್ತಮ ಪರಿಹಾರವೆಂದಯ ಭಾವಿಸಿದ್ದಾರೆ. ಆದರೆ, ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ತಲೆ ನೋವು ಬಂದಾಗ ಚಹಾ ಬದಲು ಮಸಾಲೆಯನ್ನು ಬಳಸಿಕೊಳ್ಳಿ ಎನ್ನುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ತಲೆ ನೋವು ಬಂದಾಗ ಚಹಾದ ಬದಲು ಒಂದು ಮಸಾಲೆಯನ್ನು ಬಳಸಬೇಕು. 6 ರಿಂದ 7 ಕಾಳುಮೆಣಸನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ ನಂತರ ಅದನ್ನು ನುಂಗಬೇಕು. ಕಾಳುಮೆಣಸಿನಲ್ಲಿರುವ ಪೈಪರಿನ್ ನಮ್ಮ ನರಕೋಶಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಇದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ.
ಕೆಲವೊಮ್ಮೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದಲೂ ತಲೆನೋವು ಬರಬಹುದು. ಅಂತಹ ಸಂದರ್ಭದಲ್ಲಿ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸೋಂಪು, ಅರ್ಧ ಚಮಚ ಓಮವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನಂತರ ಅದನ್ನು ಚೆನ್ನಾಗಿ ಶೋಧಿಸಿ ಸ್ವಲ್ಪ ನಿಂಬೆರಸ ಹಿಂಡಿಕೊಂಡು ಉಗುರು ಬೆಚ್ಚಗಿರುವಾಗ ಕುಡಿಯಿರಿ.
ಇನ್ನು ದೇಹದಲ್ಲಿ ದೌರ್ಬಲ್ಯ, ಸುಸ್ತು ಇದ್ದರೆ ಅದಕ್ಕೂ ಸುಲಭದ ಪರಿಹಾರವಿದೆ. ಸ್ವಲ್ಪ ಕಲ್ಲು ಉಪ್ಪು, ಒಂದು ಹೋಳು ತೆಂಗಿನಕಾಯಿ, 2 ಖರ್ಜೂರ ಮತ್ತು 6 ರಿಂದ 7 ಒಣದ್ರಾಕ್ಷಿಗಳನ್ನು ನಿಂಬೆ ರಸದಲ್ಲಿ ಬೆರೆಸಿ ಸೇವಿಸಿ. ಇದು ನಿಮಗೆ ಚೈತನ್ಯವನ್ನು ನೀಡುತ್ತದೆ.