ಹಾಸನದ ಎಸ್ ಪಿ ಕಚೇರಿ ಆವರಣದಲ್ಲೇ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಾಸನದ ಎಸ್ ಪಿ ಕಚೇರಿ ಎದುರಲ್ಲೇ ಪತ್ನಿಗೆ ನಗರದ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಕನಾಥ್ ಚಾಕುವಿನಿಂದ ಇರಿದಿದ್ದು, ಇದಿಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸದ್ಯ ಪೊಲೀಸರು ಕಾನ್ಸ್ ಟೇಬಲ್ ಲೋಕನಾಥ್ ನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಮಮತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮಮತಾ ಹಾಗೂ ಲೋಕನಾಥ್ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದು ಎಸ್ ಪಿ ಕಚೇರಿಗೆ ದೂರು ನೀಡಲು ಬಂದ ಪತ್ನಿ ಮಮತಾಗೆ ಲೋಕನಾಥ್ ಚಾಕುವಿನಿಂದ ಇರಿದಿದ್ದ.