ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಘೋಷಣೆ..!

ಬೆಂಗಳೂರು :  ಕನ್ನಡ ಚಲನಚಿತ್ರ( kannada Film) ಸಂಗೀತ( music) ಕ್ಷೇತ್ರದಲ್ಲಿ ಹಲವು ಯಶಸ್ವಿ ‘ಆಪರೇಷನ್ ಗಳನ್ನು ಮಾಡಿದ ಹೆಸರಾಂತ ಹಾಗೂ ಸುರದ್ರೂಪಿ ಸಂಗೀತ ನಿರ್ದೇಶಕ, ನಟ ಗುರುಕಿರಣ್(gurukiran) ಇನ್ನು ಮುಂದೆ ಡಾಕ್ಟರ್ ಗುರುಕಿರಣ್…

ಬೆಂಗಳೂರು :  ಕನ್ನಡ ಚಲನಚಿತ್ರ( kannada Film) ಸಂಗೀತ( music) ಕ್ಷೇತ್ರದಲ್ಲಿ ಹಲವು ಯಶಸ್ವಿ ‘ಆಪರೇಷನ್ ಗಳನ್ನು ಮಾಡಿದ ಹೆಸರಾಂತ ಹಾಗೂ ಸುರದ್ರೂಪಿ ಸಂಗೀತ ನಿರ್ದೇಶಕ, ನಟ ಗುರುಕಿರಣ್(gurukiran) ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.

ಚಲನಚಿತ್ರ, ಸಂಗೀತ ಕ್ಷೇತ್ರದಲ್ಲಿನ ಅವರ ಅದ್ವಿತೀಯ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ( honorary doctorate) ಘೋಷಣೆ ಮಾಡಿದೆ. ಇದು ಗುರು ಕಿರಣ್ ಅವರ ಲಕ್ಷಾಂತರ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಬಗ್ಗೆ ಪ್ರತಕ್ರೀಯಿಸಿರುವ ಗುರು ಕಿರಣ್ ಈ ಗೌರವ ನನ್ನ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಿರುವ ಗುರುಕಿರಣ್, ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ.

ಕರಾವಳಿ ನಗರಿ ಮಂಗಳೂರು ಮೂಲದ ಗುರುಕಿರಣ್ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು. ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ ಆಪ್ತಮಿತ್ರ(2004) ಮತ್ತು ಜೋಗಿ(2005) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿವೆ. ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. ಉಪೇಂದ್ರ, ಕುಟುಂಬ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.