ಗಮನಿಸಿ: ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು!

ರಾಜ್ಯದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಕಲಿ-ಅಕ್ರಮ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ(BPL card suspension) ಹೊಂದಿರುವವರನ್ನು ಗುರುತಿಸಿ ಇಂತಹ ಕಾರ್ಡ್ ಗಳನ್ನು ಅಮಾನತ್ತು ಮಾಡುವ ಕಾರ್ಯ ಚುರುಕುಗೊಳಿಸಲಾಗಿದೆ.

ಯಾವೆಲ್ಲ ನಿಯಮಗಳನ್ನು ಮೀರಿದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ? ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ ಹೊಂದಲು ಇರುವ ಅಧಿಕೃತ ನಿಯಮ/ಮಾರ್ಗಸೂಚಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 10,97,621 ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸಿದ ಪರಿಶೀಲನಾ ಕಾರ್ಯ ಭರದಿಂದ ಸಾಗಿದ್ದು ಸರಕಾರಿ ನೌಕರಿಯಲ್ಲಿರುವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು ಸಹ ಬಿಪಿಎಲ್ ಕಾರ್ಡ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ.

Advertisement

BPL card suspension reason- ಈ ನಿಯಮ ಮೀರಿದರೆ ನಿಮ್ಮ ಬಿಪಿಎಲ್ ಕಾರ್ಡ್ ಅಮಾನತು ಆಗುತ್ತದೆ!

ಆಹಾರ‍ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಪತ್ತೆ ಕಾರ್ಯ ಚುರುಕುಗೊಂಡಿದ್ದು ಈ ಕೆಳಗೆ ತಿಳಿಸಿರುವ ನಿಯಮವನ್ನು ಮೀರಿರುವ ಗ್ರಾಹಕರ ಬಿಪಿಎಲ್ ಕಾರ್ಡಗಳನ್ನು ಇಲಾಖೆಯಿಂದ ಅಮಾನತು ಮಾಡಲಾಗುತ್ತದೆ.

1) ಕಳೆದ ವರ್ಷ ಆದಾಯ ತೆರೆಗೆ ಪಾವತಿ ಮಾಡಿದ್ದರೆ ಅಂತಹ ಕಾರ್ಡಗಳನ್ನು ಅಮಾನತು ಮಾಡಲಾಗುತ್ತದೆ.

2) ಕಾರ್ಡ ಹೊಂದಿರುವ ಸದಸ್ಯರು ಸರಕಾರಿ ನೌಕರಿಯಲ್ಲಿದ್ದರೆ ಇಂತಹ ಸದಸ್ಯರ ಕಾರ್ಡ ಅನ್ನು ರದ್ದುಪಡಿಸಲಾಗುತ್ತದೆ.

3) ಕಳೆದ 6 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡದೇ ಪ್ರತಿ ತಿಂಗಳು ಈ ಕಾರ್ಡದಾರರಿಗೆ ನೀಡುವ ಆಹಾರ ಧ್ಯಾನಗಳನ್ನು ಪಡೆಯದೇ ಇದ್ದಲ್ಲಿ ಇಂತಹ ಬಿಪಿಎಲ್ ಕಾರ್ಡಗಳನ್ನು ಸಹ ಅಮಾನತಿನಲ್ಲಿಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಿದ್ದು ಅರ್ಹ ಗ್ರಾಹಕರು ಅಗತ್ಯ ದಾಖಲೆಗಳನ್ನು ಪುನಃ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿ ಅಮಾನತನ್ನು ರದ್ದುಪಡಿಸಿಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

4) ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎನ್ನುವ ಮಾಹಿತಿಯ ಪ್ರಕಾರ ಪರೀಶಿಲನಾ ಪಟ್ಟಿಯಲ್ಲಿ ಸೇರಿರುವ ಬಿಪಿಎಲ್ ಕಾರ್ಡದಾರರು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯನ್ನು ಭೇಟಿ ಮಾಡಿ ಪುನಃ ಆದಾಯ ದೃಡೀಕರಣ ಪ್ರಮಾಣ ಪತ್ರವನ್ನು ನೀಡಿ ಪಟ್ಟಿಯಿಂದ ಹೆಸರನ್ನು ತೆಗೆಸಿಕೊಳ್ಳಬಹುದು.kaarnataka

BPL card details-ರಾಜ್ಯದ ನಕಲಿ ಬಿಪಿಎಲ್ ಕಾರ್ಡಗಳ ಅಂಕಿ-ಅಂಶ ಹೀಗಿದೆ:

ಒಟ್ಟು ಅಕ್ರಮ ಬಿಪಿಎಲ್ ಕಾರ್ಡಗಳು- 10,97,621 ಆದಾಯ ತೆರಿಗೆ ಪಾವತಿದಾರರು- 98,431 ಸರಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಹೊಂದಿರುವವರು- 4,036

BPL card guideline-ಬಿಪಿಎಲ್ ಕಾರ್ಡ ಪಡೆಯಲು ಅನರ್ಹರು ಯಾರು?

1) ಕಳೆದ ವರ್ಷ ಆದಾಯ ತೆರಿಗೆ ಪಾವತಿಸುವವರು

2) ಸರಕಾರಿ ಮತ್ತು ಅರೆ ಸರಕಾರಿ ಕಚೇರಿಯಲ್ಲಿ ನೌಕರಿಯನ್ನು ಮಾಡುತ್ತಿರುವವರು ಕಾರ್ಡ ಪಡೆಯಲು ಅನರ್ಹರು.

3) ಸ್ವಂತ ಮನೆಯನ್ನು ಕಟ್ಟಿಸಿ ಆ ಮನೆಗಳನ್ನು ಬಾಡಿಗೆ ಕೊಟ್ಟಿರುವವರು.

4) 7.5 ಹೆಕ್ಟೇರ್‌ಗಿಂತ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂದು ಇಲಾಖಾ ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Cancelled/suspended list-2024: ನಿಮ್ಮ ಮೊಬೈಲ್ ನಲ್ಲೇ ಜಿಲ್ಲಾವಾರು ಪ್ರತಿ ತಿಂಗಳು ಅನರ್ಹಗೊಂಡಿರುವ ಪಡಿತರ ಚೀಟಿ ಪಟ್ಟಿಯನ್ನು ಪಡೆಯುವ ವಿಧಾನ:

ಆಹಾರ ಇಲಾಖೆಯ ahara.kar.nic.in ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಜಿಲ್ಲಾವಾರು ಪ್ರತಿ ತಿಂಗಳು ಅನರ್ಹಗೊಂಡಿರುವ ಪಡಿತರ ಚೀಟಿ ಪಟ್ಟಿಯನ್ನು ಪಡೆಯಬಹುದು.

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು.

Step-2: ಮೇಲಿನ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ನಂತರ ಇಲ್ಲಿ “ಇ-ಸೇವೆಗಳು” ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!

Step-3: ಎರಡು ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲಿ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/District, ತಾಲ್ಲೂಕು/Taluk ಮತ್ತು ತಿಂಗಳು/Month, ವರ್ಷ/Year ಅಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ತಿಂಗಳಲ್ಲಿ ರದ್ದಾದ ಪಡಿತರ ಚೀಟಿ ಪಟ್ಟಿ ತೋರಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು