Railway passengers: ಗಣೇಶ, ದೀಪಾವಳಿ, ದಸರಾ ಹಬ್ಬದ ಪ್ರಯುಕ್ತ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್. ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ 22 ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ನೀಡಿದ್ದು, ಗಣೇಶ ಚತುರ್ಥಿ, ದೀಪಾವಳಿ & ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ 22 ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಮುಂಗಡ ಬುಕಿಂಗ್, ನಿಲುಗಡೆ & ವೇಳಾಪಟ್ಟಿ ಅಥವಾ ಹೆಚ್ಚಿನ ಮಾಹಿತಿಗಾಗಿ, www.enquiry.indianrail.gov.in ಗೆ ಭೇಟಿ ನೀಡಿ.
ಸಾಲು, ಸಾಲು ಹಬ್ಬ, ರಜೆಗೆ ವಿಶೇಷ ರೈಲುಗಳು
ಸಾಲು ಸಾಲು ಹಬ್ಬಗಳ ಜೊತೆಗೆ ಶಾಲೆಗಳಿಗೂ ರಜೆ ಇರುವ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
SMVT ಬೆಂಗಳೂರು-ಕಲಬುರ್ಗಿ ರೈಲು ಸೆ.5 ರಿಂದ ಸೆ.7, ಕಲಬುರ್ಗಿ- SMVT ಬೆಂಗಳೂರು ರೈಲು ಸೆ. 6 ರಿಂದ ಸೆ. 8ರವರೆಗೆ ಸಂಚರಿಸಲಿದೆ. ಅಕ್ಟೋಬರ್ 30 ಮತ್ತು ನವೆಂಬರ್ 2 ರಂದು ಮೈಸೂರು -ವಿಜಯಪುರ ಮಾರ್ಗ, ಅಕ್ಟೋಬರ್ 31 ಹಾಗೂ ನವೆಂಬರ್ 3ರಂದು ವಿಜಯಪುರ- ಮೈಸೂರು ಮಾರ್ಗದಲ್ಲಿ ಸಂಚರಿಸಲಿವೆ.
ಬೆಂಗಳೂರಿನಿಂದ 22 ವಿಶೇಷ ರೈಲುಗಳು
ಅಕ್ಟೋಬರ್ 30 ಮತ್ತು ನವೆಂಬರ್ 1ರಂದು ಯಶವಂತಪುರ – ಬೆಳಗಾವಿ, ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಬೆಳಗಾವಿ – ಯಶವಂತಪುರ ಮಾರ್ಗವಾಗಿ ವಿಶೇಷ ರೈಲು ಸಂಚರಿಸಲಿದೆ. ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 9ಮತ್ತು 12ರಂದು SMVT – ವಿಜಯಪುರ ಮಾರ್ಗ, ಅಕ್ಟೋಬರ್ 10 ಮತ್ತು 13ರಂದು ವಿಜಯಪುರ – SMVT ಬೆಂಗಳೂರು, ಅಕ್ಟೋಬರ್ 9 ಮತ್ತು 12ರಂದು ಯಶವಂತಪುರ – ಬೆಳಗಾವಿ, ಅಕ್ಟೋಬರ್ 10 ಮತ್ತು 13 ರಂದು ಬೆಳಗಾವಿ – ಯಶವಂತಪುರ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ.
https://vijayaprabha.com/anganavady-4/