ಬೆಂಗಳೂರು: ಬಂಗಾರದ ಆಭರಣ ಪ್ರಿಯರಿಗೆ ದೀಪಾವಳಿ ಹಬ್ಬದ ಮುನ್ನ ಮತ್ತೊಂದು ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಗಗನಕ್ಕೇರಿದೆ. ಅದರಲ್ಲೂ ಇತ್ತೀಚೆಗೆ ಕೆಲವೇ ಕೆಲವು ದಿನಗಳಲ್ಲಿ ಕಂಡು ಕೇಳರಿಯದಷ್ಟು ದರ ಹೆಚ್ಚಳವಾಗಿದ್ದು, ಬೆಂಗಳೂರಲ್ಲಿ ದಾಖಲೆ ನಿರ್ಮಿಸಿದೆ.
ಹೌದು, ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದ್ದು, ಸೋಮವಾರ 22 ಕ್ಯಾರಟ್ ಚಿನ್ನದ ಬೆಲೆ 750 ರು. ಏರಿಕೆಯಾಗಿ, 10ಗ್ರಾಂಗೆ 82,020 ಸಾವಿರ ರೂಪಾಯಿಗೆ ತಲುಪಿದೆ. ಇನ್ನೂ ಬಿಳಿ ಲೋಹ ಬೆಳ್ಳಿಯ ಬೆಲೆಯೂ ಸಹ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದ, ಕೆ.ಜಿಗೆ 5,000 ರೂಪಾಯಿ ಹೆಚ್ಚಳ ವಾಗುವ ಮೂಲಕ ರಾಜ್ಯ ರಾಜಧಾನಿಯಲ್ಲಿ 1,03 ಲಕ್ಷ ರೂಪಾಯಿಗೆ ತಲುಪಿದೆ.
ಭಾರತದಲ್ಲಿ ಹಬ್ಬದ ಸಂದರ್ಭ ಮತ್ತು ಮದುವೆ ಸೀಸನ್ ಆರಂಭವಾಗಿರುವುದು, ಜಾಗತಿಕ ಷೇರುಪೇಟೆ ಕುಸಿತ, ಮಧ್ಯಪ್ರಾಚ್ಯದ ದೇಶಗಳ ನಡುವೆ ಬಿಕ್ಕಟ್ಟು ಸೇರಿ ಹಲವಾರು ಕಾರಣಗಳಿಗೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.