ನಮ್ಮ ಪರಿಸರ ದಲ್ಲಿ ಅದೆಷ್ಟೋ ಬಗೆಯ ಹಣ್ಣುಗಳು ಇವೆ. ಆದರೆ, ಬಹುತೇಕ ಹಣ್ಣುಗಳ ಉಪಯೋಗ ಮಾತ್ರ ನಮಗೆ ತಿಳಿದಿಲ್ಲ. ನಿಸರ್ಗದತ್ತವಾದ ಇಂತಹ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಂತಹ ಹಣ್ಣುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡ ಒಂದು. ಇದನ್ನು ಶರಬತ್ ಹಣ್ಣು ಎಂದೂ ಕೂಡ ಕರೆಯಲಾಗುತ್ತದೆ.
ಇದು ಗಸಗಸೆ ರೀತಿಯ ಬೀಜಗಳನ್ನು ಹೊಂದಿದ್ದು, ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಡು ಕೆಂಪು ಹಾಗೂ ಹಳದಿ ಹೀಗೆ ಎರಡು ವಿಧಗಳಿವೆ.
ಈ ಹಣ್ಣು ಹುಳಿ ರುಚಿಯನ್ನು ಹೊಂದಿದ್ದರೂ ಆರೋಗ್ಯ ವಿಚಾರದಲ್ಲಿ ಸಿಹಿ ಗುಣಗಳನ್ನು ಹೊಂದಿದೆ. ಇದನ್ನು ಬೆಳೆಯಲು ಉಷ್ಣ ವಲಯ ಅತ್ಯುತ್ತಮ. ಬಳ್ಳಿ ಆಗಿರುವುದರಿಂದ ಯಾವುದಾದರೂ ಮರದ ಮೇಲೂ ಬೆಳೆಯಲು ಬಿಡಬಹುದು. ಬಳ್ಳಿ ನೆಟ್ಟು, ಒಂದು ವರ್ಷದಲ್ಲಿ ಹಣ್ಣುಗಳನ್ನು ಕೊಯ್ಯಲು ಸಾಧ್ಯ. ಇದು ಉಷ್ಣ ವಲಯದಲ್ಲಿ ಬೆಳೆಯಲು ಅತಿ ಸೂಕ್ತ.
ಪ್ಯಾಶನ್ ಹಣ್ಣಿನ ಬೀಜಗಳು ಪೈಸೆಟಾನೊಲ್‌ನಲ್ಲಿ ಸಮೃದ್ಧವಾಗಿವೆ, ಇದು ಪಾಲಿಫಿನಾಲ್ ಅಧಿಕ ತೂಕ ಹೊಂದಿರುವ ಪುರುಷರಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಪ್ಯಾಶನ್ ಹಣ್ಣಿನ ಸಿಪ್ಪೆಯ ಪೂರಕವು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಈ ಹಣ್ಣಿನ ಹಲವು ಪ್ರಯೋಜಗಳು ಇಲ್ಲಿವೆ…
- ಪ್ಯಾಶನ್ ಫ್ರೂಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕೆರೋಟಿನ್, ಪೊಟಾಷಿಯಮ್, ಫೈಬರ್ ಹಾಗೂ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಇದ್ದು, ರಕ್ತ ಕಣಗಳನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ. ಡಯಾಬಿಟೀಸ್ ಹೊಂದಿರುವವರು ಇದನ್ನು ಸೇವಿಸಿದರೆ ಇನ್ ಸುಲಿನ್ ಪ್ರಮಾಣ ಕಡಿಮೆ ಮಾಡಲು ಸಹಕಾರಿ.
- ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ಲೇಟ್ಲೆಟ್ ಹೆಚ್ಚಿಸಲು ಅತ್ಯಂತ ಸರಳ ಮನೆ ಮದ್ದು ಇದು. ಇನ್ನು, ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಫೈಬರ್ ಅಂಶ ಹೃದಯದ ಆರೋಗ್ಯ ಕಾಪಾಡಲು ಉಪಕಾರಿ.
- ಪ್ಯಾಷನ್ ಹಣ್ಣಿನಲ್ಲಿ ರಿಬೋಫ್ಲಾವಿನ್ (ವಿಟಮಿನ್ ಬಿ6) ಮತ್ತು ನಿಯಾಸಿನ್ (ವಿಟಮಿನ್ ಬಿ3) ಸಮೃದ್ಧವಾಗಿವೆ. ಇದು ದೇಹದಲ್ಲಿ ಥೈರಾಯ್ಡ್ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಅಪಧಮನಿಯ ಗೋಡೆಯನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಕಾರ್ಯಗಳು ಸರಾಗವಾಗಿ ನಡೆಯುವಂತೆ ಮಾಡುವುದು.
- ಈ ಹಣ್ಣನ್ನು ತಿನ್ನುವುದರಿಂದ ಆತಂಕವನ್ನು ನಿವಾರಿಸಲು ಮತ್ತು ನಿದ್ರಾ ಹೀನತೆಯನ್ನು ತಡೆಯಲು, ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣು ಕಡಿಮೆ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಕಾರಣ ಹೃದಯ ಸ್ನೇಹಿ ಹಣ್ಣು ಎಂದೂ ಕರೆಯಲಾಗುತ್ತದೆ. ಪ್ಯಾಶನ್ ಹಣ್ಣಿನಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ ಹೃದ್ರೋಗದ ಅಪಾಯವು ಕಡಿಮೆಯಾಗುತ್ತದೆ.
- ಪ್ಯಾಷನ್ ಹಣ್ಣಿನಲ್ಲಿ ಮೆಗ್ನಿಸಿಯಮ್, ಕ್ಯಾಲ್ಸಿಯಮ್, ಕಬ್ಬಿಣ ಫಾಸ್ಪರಸ್, ಪೊಟ್ಯಾಸಿಯಮ್ ಮತ್ತು ಸೋಡಿಯಮ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಮೂಳೆಯ ಸಾಂದ್ರತೆಯನ್ನು ಕಾಪಾಡುತ್ತವೆ. ಮೂಳೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಹಣ್ಣಿನ ಬೀಜಗಳು ಅಧಿಕ ಪೋಷಕಾಂಶಗಳಿಂದ ಕೂಡಿರುತ್ತವೆ.
- ಈ ಹಣ್ಣಿನಲ್ಲಿರುವ ಸಮೃದ್ಧ ಪೋಷಕಾಂಶವು ನಿಮ್ಮ ದೇಹದ ತೂಕವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಈ ಹಣ್ಣು ಹುಳಿ ಮತ್ತು ಸಿಹಿಯಾಗಿದ್ದು ಒಮ್ಮೆ ಸವಿದವರು ಮತ್ತೆ ಮತ್ತೆ ಸೇವಿಸಬೇಕೆನಿಸುತ್ತದೆ. ಈ ಹಣ್ಣಿನ ಜ್ಯೂಸ್ ಮಾಡುವುದು ಕೂಡ ಅತಿ ಸುಲಭ. ಪ್ಯಾಶನ್ ಫ್ರೂಟ್ ಬೀಜಗಳನ್ನು ತೆಗೆದು ನೀರು ಹಾಗೂ ಸಕ್ಕರೆ ಬೆರೆಸಿ ಕುಡಿದರೆ ದೇಹ ಹಾಗೂ ಮನಸ್ಸು ತಂಪಾಗಿರುತ್ತದೆ.