ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್, ಸಿಗರೇಟ್ ಕಾಮನ್: ಬಾಲಿವುಡ್ ಹಾಟ್ ನಟಿ ಸಂಚಲನ ಹೇಳಿಕೆ!

ಮುಂಬೈ : ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್, ಈಗ ಬಾಲಿವುಡ್ ಅಂಗಳಕ್ಕೆ ತಲುಪಿದ್ದು, ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಡ್ರಗ್ಸ್ ನಂಟು ಹರಿದಾಡುತ್ತಿದೆ. ಈ ಸಂಬಂಧ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ್ದು,…

sherlyn chopra vijayaprabha

ಮುಂಬೈ : ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್, ಈಗ ಬಾಲಿವುಡ್ ಅಂಗಳಕ್ಕೆ ತಲುಪಿದ್ದು, ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಡ್ರಗ್ಸ್ ನಂಟು ಹರಿದಾಡುತ್ತಿದೆ. ಈ ಸಂಬಂಧ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ್ದು, ಅನೇಕ ಸಿನಿಮಾ ನಟ , ನಟಿಯರು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇನ್ನು ಈ ಕುರಿತು ಬಾಲಿವುಡ್ ಬೋಲ್ಡ್ ಬ್ಯುಟಿ ನಟಿ ಶರ್ಲಿನ್ ಚೋಪ್ರಾ ಅವರು ತಾನು ಮದ್ಯಪಾನ ವ್ಯಸನಕ್ಕೆ ಒಳಗಾಗಿದ್ದೆ, ಬಾಲಿವುಡ್ ನಲ್ಲಿ ಡ್ರಗ್ಸ್, ಸಿಗರೇಟ್ ಕಾಮನ್ ಎಂದು ಸಂಚಲಕಾರಿ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ಹಾಟ್ ನಟಿ ಶೆರ್ಲಿನ್ ಚೋಪ್ರಾ ಅವರು ಬಾಲಿವುಡ್ ಡ್ರಗ್ಸ್ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು ಬಾಲಿವುಡ್ ನಲ್ಲಿ ಪಾರ್ಟಿಗಳು ಹೇಗಿರುತ್ತವೆ ಎಂದು ಸಂಚಲನ ಹೇಳಿಕೆಯನ್ನು ನೀಡಿದ್ದಾಳೆ.

Vijayaprabha Mobile App free

ಈ ಹಿಂದೆ ತಾನು ಧೂಮಪಾನ ಚಟಕ್ಕೆ ಒಳಗಾಗಿದ್ದು, ಧೂಮಪಾನ ಮಾಡುವುದನ್ನು ಬಿಟ್ಟಿದ್ದು, ಮದ್ಯಪಾನ ಚಟಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದು, ಮಾರ್ಚ್ ನಲ್ಲಿ ಲಾಕ್ ಡೌನ್ ವಿಧಿಸಿದ್ದು ಅಲ್ಲಿಯವರೆಗೂ ತಾನು ಮದ್ಯಪಾನ ಮಾಡಿದ್ದೇನೆ ಎಂದು ಹೇಳಿದ್ದಲ್ಲದೇ ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ಉಪಯೋಗಿಸುತ್ತಾರೆ ಎಂದು ಹೇಳಿದ್ದಾರೆ.

ಬಾಲಿವುಡ್ ನಲ್ಲಿ ನಡೆಯೋ ಪಾರ್ಟಿಗಲ್ಲಿ ಭಾಗಿಯಾದ ಸಮಯದಲ್ಲಿ ಪ್ಲೇಟ್ ಗಳಲ್ಲಿ ಡ್ರಗ್ಸ್ ಇಟ್ಟು ಕೊಡಿತ್ತಿದ್ದರು ಎಂದು ಹೇಳಿದ್ದು, ಡ್ರಗ್ಸ್ ನಿಂದ ಆಗುವ ಪರಿಣಾಮಗಳು ನನಗೆ ಮುಂದೆ ಗೊತ್ತಿದ್ದು, ಆದ್ದರಿಂದ ಡ್ರಗ್ಸ್ ನಿಂದ ದೂರ ಇರುತ್ತಿದ್ದೆ ಎಂದು ನಟಿ ಶರ್ಲಿನ್ ಚೋಪ್ರಾ ಹೇಳಿದ್ದಾರೆ.

ಇನ್ನು ಸುಶಾಂತ್ ಸಿಂಗ್ ಕೇಸ್ ನಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ನಟಿ ಕಂಗನಾ ರಣಾವತ್ ಅವರನ್ನು ಬೆಂಬಲಿಸಿದ್ದು, ಕಂಗನಾ ಒಬ್ಬ ಧೈರ್ಯಶಾಲಿ, ಏನನ್ನಾದರೂ ಹೆದುರಿಸುವ ಶಕ್ತಿ ಇದೆ. ಅವರ ಈ ಬೆಳವಣಿಗೆಯನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಬಾಲಿವುಡ್ ಬೋಲ್ಡ್ ಬ್ಯುಟಿ ಶರ್ಲಿನ್ ಚೋಪ್ರಾ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಬಾಲಿವುಡ್ ನಟಿ ಕಂಗನಾ ರಣಾವತ್ ಕಾಲೆಳೆದ ಪ್ರಕಾಶ್ ರಾಜ್!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.