ಬಿಜೆಪಿಗರು ಧರ್ಮವನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಧರ್ಮವನ್ನು ಜನರ ಬದುಕನ್ನು ಅಭಿವೃದ್ಧಿಪಡಿಲು ಬಳಸದೆ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಆದ್ದರಿಂದಲೇ ಅರ್ಚಕರ, ದೇವಸ್ಥಾನಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ತಂದ ಮಸೂದೆ ವಿರೋಧಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ…

ಬೆಂಗಳೂರು: ಬಿಜೆಪಿ ಧರ್ಮವನ್ನು ಜನರ ಬದುಕನ್ನು ಅಭಿವೃದ್ಧಿಪಡಿಲು ಬಳಸದೆ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಆದ್ದರಿಂದಲೇ ಅರ್ಚಕರ, ದೇವಸ್ಥಾನಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ತಂದ ಮಸೂದೆ ವಿರೋಧಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ‌ ಮತ್ತು ಉಪಾಧಿವಂತರ‌ ಒಕ್ಕೂಟ ಸೋಮವಾರ ಆಯೋಜಿಸಿದ್ದ ‘ ಘಂಟಾನಾದ-2’ ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮ ಹಾಗೂ ರಾಜಕಾರಣ ಬೇರೆ ಬೇರೆಯಾಗಿರಬೇಕು. ಆದರೆ, ಬಿಜೆಪಿಗರು ತಮ್ಮ ಸ್ವಾರ್ಥಕ್ಕೆ ಧರ್ಮವನ್ನು ಬಳಸಿಕೊಳ್ಳುತ್ತಾರೆ. ಅರ್ಚಕರಿಗೆ ನಿವೇಶನ ನೀಡುವ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ದೇವಸ್ಥಾನಗಳ ಅಭಿವೃದ್ಧಿ ಸೇರಿ ಇತರೆ ಮಸೂದೆಯನ್ನು ಬಿಜೆಪಿ ಇದೇ ಕಾರಣಕ್ಕೆ ವಿರೋಧಿಸಿತು. ಆದರೂ ನಾವು ಅದನ್ನು ವಿಧಾನಪರಿಷತ್‌ನಲ್ಲಿ ಪಾಸ್‌ ಮಾಡಿದ್ದೇವೆ. ಇದೀಗ ರಾಜ್ಯಪಾಲರು ಮಸೂದೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದರು.

ಅರ್ಚಕರ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿಗರು ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಹೇಗಿದ್ದರೂ ಹಿಂದೂ, ಅರ್ಚಕರು ನಮಗೆ‌ ಮತ ಹಾಕುತ್ತಾರೆ ಎಂದು ಅವರು ಹಿಂದೂಗಳನ್ನು ಉದಾಸೀನ ಮಾಡುತ್ತಾರೆ. ಅರ್ಚಕರ ತಸ್ತೀಕ್‌ ಹೆಚ್ಚಳ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಅರ್ಚಕರು ಮೃತಪಟ್ಟರೆ ₹ 2 ಲಕ್ಷ ಪರಿಹಾರ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸಿದ್ದು ಕಾಂಗ್ರೆಸ್‌. ನಾವು ಹಿಂದು ವಿರೋಧಿಗಳಾದರೆ ಇಂತಹ ಕೆಲಸ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದರು.

Vijayaprabha Mobile App free

1000 ಅರ್ಚಕರಿಗೆ ಮನೆ ಸಹಾಯ:

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹೊಸ ಮಸೂದೆಯಲ್ಲಿ ಎ,ಬಿ, ಗ್ರೇಡ್‌ ದೇವಸ್ಥಾನಗಳ ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಪಡೆದು ಅದನ್ನು ಸಿ ಗ್ರೆಡ್‌ನ ಕನಿಷ್ಠ 1000 ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದಕ್ಕೆ ₹ 20ಕೋಟಿ ಬೇಕಾಗಲಿದೆ. ಅರ್ಚಕರ ವಿಮೆ ಕಂತಿಗೆ ಪ್ರತಿ ತಿಂಗಳು ₹ 2ಕೋಟಿ ಮೀಸಲಿಡಲಾಗುತ್ತಿದೆ. ವರ್ಷಕ್ಕೆ 1000 ಅರ್ಚಕರ ಮನೆ ನಿರ್ಮಾಣಕ್ಕೆ ಧನಸಹಾಯ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲೆಗಳಲ್ಲಿ ಸಾಮಾನ್ಯ ಸಂಗ್ರಹ ನಿಧಿಯನ್ನು ಅರ್ಚಕರ, ಸಿಬ್ಬಂದಿ ಕ್ಷೇಮಾಭಿವೃದ್ಧಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದರು.

ಅರ್ಚಕರ ಖಾತೆಗೆ ನೇರವಾಗಿ ತಸ್ತೀಕ್‌ ಬರುವಂತೆ ಮಾಡಲಾಗುತ್ತಿದ್ದು, ಡಿಸೆಂಬರ್‌ನಿಂದ ಇದು ಜಾರಿಯಾಗಲಿದೆ. ವರ್ಷಕ್ಕೆ 1200 ಅರ್ಚಕರಿಗೆ ಕಾಶಿ ಯಾತ್ರೆಗೆ ಹೋಗಲು ಅನುವುಮಾಡಿಕೊಡಲಾಗಿದೆ ಎಂದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.