ಈ ತರಹದ ಕಷಾಯ ಸೇವಿಸಿ ಡೆಂಗ್ಯೂ ಸೋಂಕಿನಿಂದ ದೂರವಿರಿ!

ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಡೆಂಗ್ಯೂ ಕೇಸ್ ಗಳು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಜನರಲ್ಲಿ ಆತಂಕ ಮೂಡಿದೆ. ಜ್ವರದ ರೋಗಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಅನುಮಾನ ಬಂದಲ್ಲಿ ವೈದ್ಯರನ್ನು ಭೇಟಿ…

ಬೆಂಗಳೂರು ಸೇರಿ ರಾಜ್ಯದಾದ್ಯಂತ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಡೆಂಗ್ಯೂ ಕೇಸ್ ಗಳು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಜನರಲ್ಲಿ ಆತಂಕ ಮೂಡಿದೆ.

ಜ್ವರದ ರೋಗಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಅನುಮಾನ ಬಂದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು. ಇಲ್ಲವಾದಲ್ಲಿ ಇದು ಮಾರಣಾಂತಿಕವಾಗಬಹುದು. ಅಲ್ಲದೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮನೆಮದ್ದುಗಳನ್ನು ಬಳಸಿ ನೋಡುವುದು ಒಳಿತು. ಹಾಗಾದರೆ ಡೆಂಗ್ಯೂ ಜ್ವರ ಬರದಂತೆ ಅಥವಾ ಬಂದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ. ಈ ಬಗ್ಗೆ ಡಾಕ್ಟರ್ ಒಬ್ಬರು ಮಾತನಾಡಿ, ವೇಗವಾಗಿ ಹರಡುತ್ತಿರುವ ಡೆಂಗ್ಯೂ ಜ್ವರ ನಿವಾರಣೆಗೆ ಸಿಂಪಲ್ ಮನೆ ಮದ್ದನ್ನು ತಿಳಿಸಿದ್ದು, ಅವರು ಹೇಳುವ ಪ್ರಕಾರ, “ಈಗ ನಾವು ಡೆಂಗ್ಯೂಗೆ ಹೆದರುವ ಪರಿಸ್ಥಿತಿಗೆ ಬಂದಿದ್ದೇವೆ. ಈ ಜ್ವರ ಬಂದಾಗ ನಿಮಗೆ ನೆಗಡಿ ಆಗುವುದಿಲ್ಲ, ಕೆಮ್ಮು ಬರುವುದಿಲ್ಲ.

ಆದರೆ ಮೈ ಕೈ ನೋವು ಬರುತ್ತದೆ. ಹೊಟ್ಟೆ ನೋವು ಬರುತ್ತದೆ. ತಲೆನೋವು ಕಂಡು ಬರುತ್ತದೆ, ಜ್ವರ ಬಂದು ಎರಡು ದಿನಗಳ ನಂತರ ದೇಹದಲ್ಲಿ ತುರಿಕೆ, ದದ್ದುಗಳು ಕಂಡು ಬಂದರೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಜ್ವರ, ಹೊಟ್ಟೆ ನೋವು, ವಾಂತಿಯಾದರೂ ಕೂಡ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದಲ್ಲಿ ಬಿಳಿ ರಕ್ತ ಕಣಗಳು ಕಡಿಮೆ ಆಗುತ್ತದೆ, ಉಸಿರಾಟದಲ್ಲಿ ತೊಂದರೆ ಉಂಟಾಗುತ್ತದೆ ಹಾಗಾಗಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಹೇಳಿರುವ ಮನೆಮದ್ದನ್ನು ಸರಿಯಾಗಿ ಮಾಡಿದರೆ ಈ ಜ್ವರಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ.”

Vijayaprabha Mobile App free

ಹಾಗಾದರೆ ಈ ಪಾನೀಯ ಅಥವಾ ಕಷಾಯವನ್ನು ಮನೆಯಲ್ಲಿಯೇ ಮಾಡುವುದು ಹೇಗೆ? ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ತಿಳಿಯಿರಿ. ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು: ಅಮೃತ ಬಳ್ಳಿಯ ಕಾಂಡ ಬೇವಿನ ಕಡ್ಡಿ ಹಸಿ ಶುಂಠಿ ನಿಂಬೆ ರಸ ಏಲಕ್ಕಿ ಪುಡಿ ಜೇನು ತುಪ್ಪ ಮಾಡುವ ವಿಧಾನ: ಮೊದಲು ಸ್ವಲ್ಪ ಅಮೃತಬಳ್ಳಿಯ ಬಲಿತ ಭಾಗ ಮತ್ತು ಬೇವಿನಕಡ್ಡಿ ಹಾಗೂ ಹಸಿ ಶುಂಠಿಯನ್ನು ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿ, ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕುದಿಸಿ, ಕುದಿಯಲು ಶುರುವಾದಾಗ ಒಲೆ ಆರಿಸಿ. ನೀರಿನಂಶವನ್ನು ಒಂದು ಪಾತ್ರೆಗೆ ಶೋಧಿಸಿಕೊಂಡು, ಆ ನೀರಿನಂಶಕ್ಕೆ ನಿಂಬೆ ಹಣ್ಣಿನ ರಸ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಆರಿದ ಮೇಲೆ ಜೇನುತುಪ್ಪ ಹಾಕಿ ಕಲಸಿದರೆ ಡೆಂಗ್ಯೂ ಜ್ವರಕ್ಕೆ ಔಷಧಿ ರೆಡಿಯಾಗುತ್ತದೆ.

ಪ್ರಯೋಜನಗಳೇನು? ಅಮೃತ ಬಳ್ಳಿ ಹೆಸರೇ ಹೇಳುವಂತೆ ಅಮೃತದಂತಹ ಅಂಶವನ್ನು ಒಳಗೊಂಡಿರುವಂತಹ ಗಿಡಮೂಲಿಕೆ, ಈ ಬಳ್ಳಿಯಲ್ಲಿ ಯಾವುದೇ ರೀತಿಯ ಜ್ವರವಿರಲಿ ಅದನ್ನು ಹೋಗಲಾಡಿಸುವಂತಹ ಶಕ್ತಿ ಇದೆ. ಅಮೃತ ಬಳ್ಳಿ ಎಲೆ ಮಾತ್ರವಲ್ಲ ಅದರ ಬಳ್ಳಿಯಲ್ಲಿಯೇ ಸಾರ, ಶಕ್ತಿ ಎಲ್ಲವೂ ಇದೆ. ಬೇವಿನಲ್ಲಿಯೂ ಕೂಡ ಅತ್ಯಂತ ಶಕ್ತಿಶಾಲಿಯಾದಂತಹ ಆರೋಗ್ಯ ಪ್ರಯೋಜನಗಳಿವೆ. ಕಹಿ ಅಂಶ ಒಂದನ್ನು ಬಿಟ್ಟರೆ ಇದು ಕೂಡ ಅಮೃತಕ್ಕೆ ಸಮನಾಗಿದೆ. ಇದರ ಕಡ್ಡಿಯಲ್ಲಿ ವೈರಲ್ ಜ್ವರ, ಟೈಫಾಯಿಡ್, ಫ್ಲೂ, ಡೆಂಗ್ಯೂ, ಮಲೇರಿಯಾ ಯಾವುದೇ ಜ್ವರವಿದ್ದರೂ ಕೂಡ ಅದನ್ನು ಶಮನಗೊಳಿಸುವ ಶಕ್ತಿ ಇದೆ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಶುಂಠಿ ನಿವಾರಣೆ ಮಾಡುತ್ತದೆ. ಹಾಗಾಗಿ ವಾರಕ್ಕೊಮ್ಮೆ ಈ ಪಾನೀಯವನ್ನು ಸೇವನೆ ಮಾಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.