Deepfake technology: AI ಟೆಕ್ನಾಲಜಿಯನ್ನ (AI Technology) ಒಳ್ಳೆಯದ್ದಕ್ಕಿಂತ ಕೆಟ್ಟದ್ದಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಡೀಪ್ ಫೇಕ್ ವಿಡಿಯೋಗಳ (Deepfake video) ಹಾವಳಿ ಹೆಚ್ಚಾಗಿದ್ದು, ದರ್ಶನ್- ಧನ್ವಿರ್ ವಿಡಿಯೋ ದುರ್ಬಳಕೆ ಮತ್ತು ಅಪ್ಪು ಪತ್ನಿ ಅಶ್ವಿನಿ ನಕಲಿ ಅಶ್ಲೀಲ ವಿಡಿಯೊ ವೈರಲ್ ಆಗಿದೆ.
ಬೇರೆಯವರ ದೇಹಕ್ಕೆ ಇನ್ಯಾರದ್ದೂ ಮುಖವನ್ನು ಸಂದೇಹ ಬಾರದಂತೆ ಅಳವಡಿಕೆ ಮಾಡುವುದೇ ಡೀಪ್ ಫೇಕ್ (Deepfake). ಇದರಲ್ಲಿ ತುಟಿಗಳ ಚಲನೆಯನ್ನೂ ಹೊಂದಿಕೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಈ ವಿಡಿಯೋ ನಿಜ ಎನಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೂ ಕೂಡಾ ಡೀಪ್ ಫೇಕ್ (Deepfake) ಎಂದು ತಿಳಿಯುವುದು ಕೂಡಾ ಕಷ್ಟ.
ಎಐ ತಂತ್ರಜ್ಞಾನ ಬಳಸಿ ದರ್ಶನ್- ಧನ್ವಿರ್ ವಿಡಿಯೋ ದುರ್ಬಳಕೆ..!
ಈಗಾಗಲೇ ಸಾಕಷ್ಟು ಮಂದಿ ನಟ, ನಟಿಯರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್, ಕಾಜೋಲ್ ಮಾತ್ರವಲ್ಲ, ಕ್ರಿಕೆಟಿಗ ಸಚಿನ್ ತೆಂಡೊಲ್ಕರ್ ಪುತ್ರಿ ಸಾರಾ ತೆಂಡೊಲ್ಕರ್ ಅವರ ಡೀಪ್ ಫೇಕ್ ವಿಡಿಯೋ ಕೂಡಾ ವೈರಲ್ ಆಗಿತ್ತು, ಇದೀಗ ದರ್ಶನ್- ಧನ್ವಿರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟ ದರ್ಶನ್ ಹಾಗೂ ಧನ್ವೀರ್ ಪರಸ್ಪರ ಮುತ್ತು ಕೊಡುತ್ತಿರುವಂತೆ ವಿಡಿಯೋ ಎಡಿಟ್ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.
ಡಾ.ರಾಜ್ ಫ್ಯಾಮಿಲಿಗೂ ಬಿಡಲಿಲ್ಲ Deepfake ಎಫೆಕ್ಟ್
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರನ್ನು ಕಾಡಿದ್ದ Deepfake (ಅಶ್ಲೀಲ) ವಿಡಿಯೊ ಭೀತಿ ಡಾ.ರಾಜ್ ಫ್ಯಾಮಿಲಿಗೂ ಕಾಡಲಾರಂಭಿಸಿದ್ದು, ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ಪು ಪತ್ನಿ ಅಶ್ವಿನಿಯವರ ನಕಲಿ ವಿಡಿಯೋ ಅಪ್ಲೋಡ್ ಮಾಡಿ ಕೆಟ್ಟದ್ದಾಗಿ ಬರೆಯಲಾಗಿದ್ದು, ‘ಗಂಡ ಸತ್ತ ಮು** ಅಶ್ವಿನಿ ಅವರಿಗೆ ಬಾಳು ಕೊಡಲು ನಿರ್ಧರಿಸಿದ್ದೇನೆ ಎಂದು ಬರೆಯಲಾಗಿದೆ.
ಎಐ ತಂತ್ರಜ್ಞಾನದ ದರ್ಬಳಕೆ ಅಪರಾಧಕ್ಕೆ ಶಿಕ್ಷೆ ಏನು?
ಎಐ ತಂತ್ರಜ್ಞಾನದ ದರ್ಬಳಕೆಗೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್ 66ರ ಪ್ರಕಾರ, ಇನ್ನೊಬ್ಬರ ಗುರುತು ಕಳವು ಮಾಡಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದಕ್ಕೆ 3 ವರ್ಷ ಜೈಲು ಶಿಕ್ಷೆ. ಜೊತೆಗೆ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಕಾಪಿ ರೈಟ್ ಕಾಯ್ದೆ 1957ರ ಸೆಕ್ಷನ್ 16ರ ಪ್ರಕಾರ ವೀಡಿಯೋ ದುರ್ಬಳಕೆ ಮಾಡಿಕೊಂಡರೆ 3 ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಬಹುದು.
https://vijayaprabha.com/ashwini-puneet-rajkumar-fake-porn-video-viral/