ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪ ಅಗ್ರಹಾರ ಜೈಲು ಸೇರಿದ್ದ ದರ್ಶನ್ಗೆ ರಾಜಾತಿಥ್ಯ ನೀಡಿರುವ ಕುರಿತು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿದ್ದ ದರ್ಶನ್ ಫೋಟೋ ಜೈಲಿನ ಕರ್ಮಕಾಂಡವನ್ನ ಹೊರತಂದಿತ್ತು. ಇದೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಜೈಲಿನ ಮೇಲೆ ನಿನ್ನೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ.
ಈ ದಾಳಿ ವೇಳೆ ವಿಲ್ಸನ್ ಗಾರ್ಡನ್ ನಾಗನ ಬಳಿ ಇದ್ದ ಮೊಬೈಲ್ ಸೇರಿದಂತೆ ಸುಮಾರು 18 ಮೊಬೈಲ್ ಸೀಜ್ ಆಗಿದೆ. ಡ್ರಗ್ಸ್ ಮತ್ತು ಹಣ ಕೂಡ ಸಿಕ್ಕಿದೆ. ಆತನ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ತಂಡ ಆತನ ಮೊಬೈಲ್ ಸೀಜ್ ಮಾಡಿ ಮತ್ತೆ ಈ ರೀತಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ.
ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್‌ಗಳು, ಏಳು ಎಲೆಕ್ಟ್ರಿಕ್ ಸ್ಟವ್‌ಗಳು, ಐದು ಚಾಕುಗಳು, ಮೂರು ಮೊಬೈಲ್ ಫೋನ್ ಚಾರ್ಜರ್‌ಗಳು, ಎರಡು ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.