Crime: ತಮ್ಮದೇ ತಿಂಗಳ ಹಸುಗೂಸನ್ನ ಹತ್ಯೆಗೈದ ದಂಪತಿ!

ಮುಜಾಫರ್‌ನಗರ: ತಮ್ಮದೇ ತಿಂಗಳ ಹಸುಳೆಯನ್ನ ಮಾಂತ್ರಿಕನ‌ ಮಾತು ಕೇಳಿ ಪಾಲಕರೇ ಬಲಿಕೊಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ನಡೆದಿದೆ. ಮಗುವಿನ ತಾಯಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪರಿಹಾರಕ್ಕಾಗಿ ದಂಪತಿಯು ಮಾಂತ್ರಿಕನ ಬಳಿ…

ಮುಜಾಫರ್‌ನಗರ: ತಮ್ಮದೇ ತಿಂಗಳ ಹಸುಳೆಯನ್ನ ಮಾಂತ್ರಿಕನ‌ ಮಾತು ಕೇಳಿ ಪಾಲಕರೇ ಬಲಿಕೊಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ನಡೆದಿದೆ.

ಮಗುವಿನ ತಾಯಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪರಿಹಾರಕ್ಕಾಗಿ ದಂಪತಿಯು ಮಾಂತ್ರಿಕನ ಬಳಿ ತೆರಳಿದಾಗ ಮಗುವನ್ನು ಬಲಿಕೊಡಲು ಸಲಹೆ ನೀಡಿದ್ದಾನೆ. ಮಾಂತ್ರಿಕನ ಬಳಿ ದಂಪತಿ ತೆರಳುವುದನ್ನು ಕಂಡಿದ್ದ ಪಕ್ಕದ ಮನೆಯವರು, ವಾಪಸ್ಸು ಬಂದಾಗ ಮಗು ಇರದ್ದನ್ನ ಕಂಡು ಅನಾಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರ ವಿಚಾರಣೆ ವೇಳೆ ತಂದೆ- ತಾಯಿ ಇಬ್ಬರೂ ಮಗುವನ್ನು ಕೊಂದು ಶವವನ್ನು ಕಾಡಿನಲ್ಲಿ ಎಲ್ಲೋ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ದಂಪತಿ ಸೇರಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಈವರೆಗೆ ಮಗುವಿನ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.