Annabhagya: ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ (Annabhagya Yojana) 5KG ಅಕ್ಕಿಯ ಹಣ ನೀಡುವುದನ್ನು ಮುಂದುವರೆಸುವ ಸೇರಿ ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರ (State Government) ಅನುಮೋದನೆ ನೀಡಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಆಹಾರ ಇಲಾಖೆಯಿಂದ ಪಡಿತರ ಫಲಾನುಭವಿಗಳಿಗೆ ನೀಡುತ್ತಿರುವ ಹಣದ ಬದಲು, ಇತರೆ ಆಹಾರ ಪದಾರ್ಥ ನೀಡುವ ಚಿಂತನೆ ಇತ್ತು. ಆದರೆ ಅದನ್ನು ಸರ್ಕಾರ ಕೈಬಿಟ್ಟಿದ್ದು, ಇದೀಗ ಮತ್ತೆ DBT ಮೂಲಕ ಫಲಾನುಭವಿಗಳ ಖಾತೆಗೆ ಹಣವನ್ನು(ವ್ಯಕ್ತಿಗೆ 170 ರೂ) ನೀಡಲು ಮುಂದುವರೆಸುವುದಾಗಿ ನಿರ್ಧರಿಸಿದೆ.
ಮುಂದಿನ ತಿಂಗಳಿನಿಂದಲೇ ಫುಡ್ ಕಿಟ್ ವಿತರಣೆ?
ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದು, ಅನ್ನಭಾಗ್ಯದ ಹಣದ ಬದಲಿಗೆ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ತೊಗರಿ ಬೇಳೆ, ಸಕ್ಕರೆ, ತಾಳೆ ಎಣ್ಣೆ ಹಾಗೂ ಅಯೋಡೈಸ್ ಉಪ್ಪು ನೀಡಲಿದೆ.
ಈ ಬಗ್ಗೆ ಆಹಾರ & ನಾಗರಿಕರ ಸರಬರಾಜು ಇಲಾಖೆ ಹಣಕಾಸು ಅನುಮೋದನೆಗಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದ್ದು, ಅಕ್ಟೋಬರ್‌ನಿಂದಲೇ ಈ ನೂತನ ಯೋಜನೆ ಜಾರಿಗೆ ಬರಲಿದೆ. ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದೆ ಎನ್ನಲಾಗಿದೆ.
https://vijayaprabha.com/fir-filed-against-director-yograj-bhatt/