ಇತಿಹಾಸದಲ್ಲೇ ಮೊದಲ ಬಾರಿ ʻKRSʼ ಡ್ಯಾಂಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಬಾಗಿನ ಅರ್ಪಣೆ

ಮಂಡ್ಯ : KRS ಜಲಾಶಯ ಸಂಪೂರ್ಣ ಭರ್ತಿ ಹಿನ್ನೆಲೆ. ತುಂಬಿದ ಕಾವೇರಿಗೆ ಇಂದು ಸಿಎಂ‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಬಾಗಿ‌ನ ಅರ್ಪಿಸಿದ್ದಾರೆ. ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ಬಾಗಿನ ಸಮರ್ಪಣೆ ಆಗಿದೆ. ಮಾಜಿ…

ಮಂಡ್ಯ : KRS ಜಲಾಶಯ ಸಂಪೂರ್ಣ ಭರ್ತಿ ಹಿನ್ನೆಲೆ. ತುಂಬಿದ ಕಾವೇರಿಗೆ ಇಂದು ಸಿಎಂ‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಬಾಗಿ‌ನ ಅರ್ಪಿಸಿದ್ದಾರೆ.

ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ಬಾಗಿನ ಸಮರ್ಪಣೆ ಆಗಿದೆ. ಮಾಜಿ ಸಿಎಂ‌ ಡಿ. ದೇವರಾಜ ಅರಸು‌ ಕಾಲದಲ್ಲಿ ಬಾಗಿನ ಸಂಪ್ರದಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಆಷಾಢ ಮಾಸದಲ್ಲಿ ಬಾಗಿನ ಸಮರ್ಪಣೆ ಇದೇ ಮೊದಲಾಗಿದೆ.

ಸಾಮಾನ್ಯವಾಗಿ ಶ್ರಾವಣ ಅಥವಾ ಭಾದ್ರಪದ ಮಾಸದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ. ಈ ಹಿಂದೆಯೆಲ್ಲಾ ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬ ಸಂಧರ್ಭ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ‌ ಮುಂಚಿತವಾಗಿ‌ KRS ಅಣೆಕಟ್ಟೆ ಭರ್ತಿ ಹಿನ್ನೆಲೆಯಲಿ 3ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಕಾವೇರಿ ತಾಯಿಗೆ ಬಾಗಿನ ನೀಡಿದ್ದಾರೆ.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.