ಬೆಂಗಳೂರು: ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ (MUDA Scam) ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮುಡಾ ಜಮೀನು ಅವ್ಯವಹಾರದ ಕುರಿತು ಬಿಜೆಪಿ- ಜೆಡಿಎಸ್ ನಡೆಸುತ್ತಿರುವ ಹೋರಾಟ ಹಾಗೂ ಆರೋಪಗಳಿಗೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಜಮೀನು ಸರ್ಕಾದಿಂದ ಗ್ರ್ಯಾಂಟ್ ಆಗಿದ್ದಲ್ಲ ಹಾಗೂ ಪ್ರಸ್ತುತ ಹಕ್ಕುದಾರಿಕೆ ಇದೆ ಎಂದು ಹೇಳುತ್ತಿರುವ ಮಂಜುನಾಥ್ ಸ್ವಾಮಿ ಅದರ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.