ಶಿವಮೊಗ್ಗ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನ ಭಯೋತ್ಪಾದಕ ಎಂದು ಹೇಳುವ ಸಿಎಂ ಸಿದ್ದರಾಮಯ್ಯರೇ ನಿಜವಾದ ಭಯೋತ್ಪಾದಕ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಲೂಟಿಯಲ್ಲಿ ತೊಡಗಿದ್ದು, ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಬಾಂಬ್ ಹಾಕಿದ್ದವರು ಬ್ರದರ್ಸ್, ಕದ್ದವರು ಅಮಾಯಕರು, ಬಾಂಗ್ಲಾ ವ್ಯವಸ್ಥೆಯನ್ನ ಬೆಂಬಲಿಸುವವರು ದೇಶಭಕ್ತರಂತೆ ಕಾಣುವ ಅಲಿಖಿತ ಸಂವಿಧಾನ ರಾಜ್ಯದಲ್ಲಿ ಜಾರಿಯಾಗಿದೆ ಎಂದಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಕ್ಕೆ ಸಿಎಂ ಹೋದರೆ ಸಾರ್ವಜನಿಕರು ಸೈಟ್ ಕಳ್ಳ ಬಂದ ಎನ್ನುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ಸಚಿವರೆಲ್ಲರೂ ಜಾಮೀನನ ಮೇಲೆ ಹೊರಗಿದ್ದಾರೆ ಎಂದ ಅವರು, ಹುಬ್ಬಳ್ಳಿ ಕೇಸ್‌ನ ಹಿಂಪಡೆಯುವ ಸರ್ಕಾರ ಹಿಂದೂ ಸಂಘಟನೆ, ದಲಿತರ, ರೈತರ ವಿರುದ್ಧ ಕೇಸ್‌ಗಳನ್ನ ಯಾಕೆ ವಾಪಾಸ್ ಪಡೆಯಲಿಲ್ಲ? ಎಂದು ಪ್ರಶ್ನಿಸಿದ್ದಾರೆ.