ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಚೈತ್ರಾ ಆಚಾರ್ ಗೆ ಕಾಲಿವುಡ್ ನಿಂದ ಒಂದಾದ ಮೇಲೊಂದರಂತೆ ಅವಕಾಶಗಳು ಅರಸಿ ಬರುತ್ತಲೇ ಇದೆ. ಇದೀಗ ನಟ ಸಿದ್ಧಾರ್ಥ್ ಗೆ ನಾಯಕಿಯಾಗಿ ಚೈತ್ರಾ ಆಯ್ಕೆಯಾಗಿದ್ದಾರೆ.
ಚೈತ್ರಾ ಅವರನ್ನು ಅರಸಿ ತಮಿಳಿನಿಂದ ಉತ್ತಮ ಅವಕಾಶಗಳು ಬರುತ್ತಿವೆ. ಈಗಾಗಲೇ ನಟ ಶಶಿಕುಮಾರ್ ಗೆ ಜೋಡಿಯಾಗಿ ರಾಜು ಮುರುಗನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚೈತ್ರಾ ಅವರು ತಮಿಳಿನ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಗೆ ನಾಯಕಿಯಾಗಿ ಚೈತ್ರಾ ನಟಿಸಲಿದ್ದಾರೆ.
ಒಂದಾದ ಮೇಲೊಂದರಂತೆ ಚೈತ್ರಾ ಅವರಿಗೆ ತಮಿಳಿನಿಂದ ಬಂಪರ್ ಅವಕಾಶಗಳು ಸಿಗುತ್ತಿವೆ. ಇದೀಗ ಶಾಂತಿ ಟಾಕೀಸ್ ನಿರ್ಮಾಣದ, ಶ್ರೀ ಗಣೇಶ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾವೊಂದರಲ್ಲಿ ನಟ ಸಿದ್ಧಾರ್ಥ್ ಗೆ ಜೋಡಿಯಾಗಿ ನಟಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಚೈತ್ರಾ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಇನ್ನು ಈ ಸಿನಿಮಾದಲ್ಲಿ ಸಿದ್ಧಾರ್ಥ್, ಚೈತ್ರಾ ಆಚಾರ್ ಜೊತೆಗೆ ಹಿರಿಯ ನಟ ಶರತ್‌ಕುಮಾರ್ ದೇವಯಾನಿ, ಮಿತಾ ರಘುನಾಥ್ ಸೇರಿದಂತೆ ಅನೇಕ ಕಲಾವಿದರು ನಟಿಸಲಿದ್ದಾರೆ.