BPL card holders: ನಕಲಿ ದಾಖಲೆ ನೀಡಿ ಅಕ್ರಮವಾಗಿ BPL ಕಾರ್ಡ್ (BPL card) ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಇವುಗಳ ಕಡಿವಾಣಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚಿಸಿದ್ದಾರೆ.
ಹೌದು, ಸಚಿವ ಸಂಪುಟ ಸಭೆಯಲ್ಲಿ ಸಚಿವರು ಅಕ್ರಮ BPL ಕಾರ್ಡ್‌ಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಹಾಗಾಗಿ ಇದೀಗ ಸುಳ್ಳು ಮಾಹಿತಿ ನೀಡಿ BPL ಪಡೆದವರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಇದುವರೆಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದ ಅಕ್ಕಿ ಮತ್ತು ಇತರೆ ಧಾನ್ಯಗಳ ಮೊತ್ತವನ್ನು ಮರಳಿಸಬೇಕು ಜೊತೆಗೆ ಕ್ರಿಮಿನಲ್ ಕೇಸ್ ಎದುರಿಸಬೇಕಾಗುತ್ತದೆ.
3,310 ರೇಷನ್ ಕಾರ್ಡ್‌ಗಳು ರದ್ದು!
ಇನ್ನು, ಸತತ 6 ತಿಂಗಳಿಂದ ಪಡಿತರ ಪಡೆದುಕೊಳ್ಳದ ಮತ್ತು ಅಕ್ರಮವಾಗಿ ಪಡೆದಿರುವ ಅಂತ್ಯೋದಯ ಅನ್ನ ಯೋಜನೆ, BPL ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ಕಂಡು ಬಂದಿರುವ ಉ.ಕನ್ನಡ ಜಿಲ್ಲೆಯ 3,310 ಕಾರ್ಡ್‌ಗಳನ್ನು ಅಮಾನತುಗೊಳಿಸಿ ಆಹಾರ & ನಾಗರಿಕ ಪೂರೈಕೆ ಇಲಾಖೆ ಆದೇಶಿಸಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ ಮಾಹಿತಿ ಆಧರಿಸಿ 2023ರ ನವೆಂಬರ್ ನಿಂದ 2024ರ ಏಪ್ರಿಲ್ ವರೆಗೆ ಪಡಿತರ ಪಡೆದುಕೊಳ್ಳದ ಕಾರ್ಡ್‌ಗಳ ಮೇಲೆ ಕ್ರಮವಹಿಸಲು ಇಲಾಖೆ ಸೂಚಿಸಿತ್ತು. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
https://vijayaprabha.com/job-news-67/