ಚಂಡಮಾರುತ ಸ್ವರೂಪ ಪಡೆಯಲಿದೆ ವಾಯುಭಾರ ಕುಸಿತ: ಒಮಾನ್‌ ದೇಶದಿಂದ ‘ಡನಾ’ ನಾಮಕರಣ

ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಪೂರ್ವ ಕರಾವಳಿಯ ಕಡೆ ಸಾಗಿದ್ದು, ಬುಧವಾರ ಚಂಡಮಾರುತದ ಸ್ವರೂಪ ಪಡೆಯಲಿದೆ ಹಾಗೂ ಅ.25ರಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಒಡಿಶಾ, ಪ.ಬಂಗಾಳ ಹಾಗೂ ಆಂಧ್ರಪ್ರದೇಶ ಕರಾವಳಿಗಳಲ್ಲಿ…

ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಪೂರ್ವ ಕರಾವಳಿಯ ಕಡೆ ಸಾಗಿದ್ದು, ಬುಧವಾರ ಚಂಡಮಾರುತದ ಸ್ವರೂಪ ಪಡೆಯಲಿದೆ ಹಾಗೂ ಅ.25ರಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಒಡಿಶಾ, ಪ.ಬಂಗಾಳ ಹಾಗೂ ಆಂಧ್ರಪ್ರದೇಶ ಕರಾವಳಿಗಳಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

ಈ ಚಂಡಮಾರುತಕ್ಕೆ ಒಮಾನ್‌ ದೇಶವು ‘ಡನಾ’ (ಅರೇಬಿಕ್‌ನಲ್ಲಿ ಔದಾರ್ಯ ಎಂದರ್ಥ) ಎಂದು ಹೆಸರಿಟ್ಟಿದೆ.

‘ವಾಯುಭಾರ ಕುಸಿತವು ಪಶ್ಚಿಮ-ವಾಯವ್ಯದ ಕಡೆ ಸಾಗಿ, ಅ.23ರಂದು ಚಂಡಮಾರುತವಾಗಲಿದೆ. ಇದು ಅ.25ರಂದು ಒಡಿಶಾದ ಉತ್ತರ ಭಾಗ ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ತೀರದಲ್ಲಿರುವ ಪುರಿ ಮತ್ತು ಸಾಗರ್‌ ಮಧ್ಯೆ ಅಪ್ಪಳಿಸಲಿದ್ದು, ಗಂಟೆಗೆ 100-110 ಕಿಮೀ ತೀವ್ರತೆಯಲ್ಲಿ ಗಾಳಿ ಬೀಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Vijayaprabha Mobile App free

ಬುಧವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರಗಳಲ್ಲಿ ಗಾಳಿಯ ತೀವ್ರತೆ ಗಂಟೆಗೆ 60 ಕಿಮೀ ತಲುಪಲಿದ್ದು, ಅ.23ರಿಂದ 25ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಸಲಾಗಿದೆ. ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿ, ಪ್ರಕೋಪವನ್ನು ಎದುರಿಸಲು ಸಿದ್ಧರಿರುವಂತೆ ಸೂಚಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.