ಉಚಿತ ಜಿಮ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿ: ಆಸಕ್ತರಿಗೆ ಇಲ್ಲಿದೆ ಭರ್ಜರಿ ಅವಕಾಶ

ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳು ಉಚಿತ ತರಬೇತಿಯನ್ನು(best business ideas) ಪಡೆಯಲು ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕ / ಯುವತಿಯರಿಗೆ ಸ್ವ-ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಮ್/ಫಿಟ್ನೆಸ್(fitness trainer), ಬ್ಯೂಟೀಷಿಯನ್(Beautician course), ಚಾಟ್ಸ್(chaat shop) ತಯಾರಿಕೆ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ಪಡೆದುಕೊಂಡು ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.

free Beautician course-ಯಾವೆಲ್ಲ ತರಬೇತಿ ಲಭ್ಯ:

Advertisement

1) ಜಿಮ್/ ಫಿಟ್ನೆಸ್ ಕೋಚ್- 15 ದಿನಗಳು2) ಬ್ಯೂಟಿಷಿಯನ್- 13 ದಿನಗಳು3) ಚಾಟ್ಸ್ ತಯಾರಿಕೆ- 06 ದಿನಗಳು

ಆಸಕ್ತಿ ಅನುಗುಣವಾಗಿ ಈ ಮೇಲೆ ತಿಳಿಸಿದ ಒಟ್ಟು 3 ತರಬೇತಿಗಳಿಗೆ ಒಂದರಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

Beautician, gym coach training-ತರಬೇತಿ ನಡೆಯುವ ದಿನಾಂಕ ಮತ್ತು ಸ್ಥಳ:

1) ಜಿಮ್/ ಫಿಟ್ನೆಸ್ ಕೋಚ್- 15 ದಿನಗಳು: ಈ ತರಬೇತಿಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್  3 ರವರೆಗೆ ನಡೆಯುತ್ತದೆ. ಸ್ಥಳ: ಬೆಂಗಳೂರಿನ   ಶ್ರೀ ಕಂಠೀರವ ಕ್ರೀಡಾಂಗಣ.2) ಬ್ಯೂಟಿಷಿಯನ್- 13 ದಿನಗಳು: ಸೆಪ್ಟೆಂಬರ್ 21 ರಿಂದ ಅಕ್ಟೋಬರ್  3 ರವರೆಗೆ ಆಯೋಜನೆ ಮಾಡಲಾಗಿದೆ. ಸ್ಥಳ: ಕೋರಮಂಗಲದ ಒಳಾಂಗಣ ಕ್ರೀಡಾಂಗಣ.3) ಚಾಟ್ಸ್ ತಯಾರಿಕೆ- 06 ದಿನಗಳು: ಅಕ್ಟೋಬರ್ 4 ರಿಂದ 9 ರವರೆಗೆ  ಹಮ್ಮಿಕೊಳ್ಳಲಾಗಿದೆ. ಸ್ಥಳ: ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ

ತರಬೇತಿ ಸಮಯ: ಮೂರು ತರಬೇತಿಗಳು ಬೆಳಿಗ್ಗೆ 10-00 ರಿಂದ ಪ್ರಾರಂಭವಾಗಿ ಸಂಜೆ 5.30 ಗಂಟೆಯವರೆಗೆ ನಡೆಯುತ್ತವೆ.

How can apply-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಜಿಮ್/ ಫಿಟ್ನೆಸ್ ತರಬೇತಿ ಪಡೆಯಲು ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ 40 ವರ್ಷದೊಳಗಿರಬೇಕು.

ಬ್ಯೂಟಿಷಿಯನ್/ ಚಾಟ್ಸ್ ತಯಾರಿಕೆ ತರಬೇತಿಯಲ್ಲಿ ಭಾಗವಹಿಸಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾಗಿರುವವರು ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಟ 40  ವರ್ಷದೊಳಗಿರಬೇಕು.

ಉಚಿತ ಉಪಹಾರ ಮತ್ತು ವಸತಿ ವ್ಯವಸ್ಥೆ:

ತರಬೇತಿಯಲ್ಲಿ ಭಾಗವಹಿಸಲು ಬರುವ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತ ಲಘು ಉಪಹಾರ ಮತ್ತು ಪ್ರಯಾಣ ಭತ್ಯೆ, ಸಾಮಾನ್ಯ ವಸತಿ ವ್ಯವಸ್ಥೆಯನ್ನು ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗುತ್ತದೆ.

Documents- ಅಗತ್ಯ ದಾಖಲಾತಿಗಳು:

1) ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ.

2) ಜನ್ಮ ದಿನಾಂಕ ಪ್ರಮಾಣ ಪತ್ರ.

3) ಜಾತಿ ಪ್ರಮಾಣ ಪತ್ರ.

4) ಪೋಟೋ.

5) ವಿದ್ಯಾರ್ಹತೆ ಅಂಕಪಟ್ಟಿ.

ಆಸಕ್ತ ಯುವಕ / ಯುವತಿಯರು ತಮ್ಮ ಜನ್ಮ ದಿನಾಂಕದ ದಾಖಲೆಯೊಂದಿಗೆ ಸಹಾಯವಾಣಿ ಸಂಖ್ಯೆ 155265 ಹಾಗೂ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು -560001 ಗೆ  ಅಥವಾ ಮೊಬೈಲ್ ದೂರವಾಣಿ ಸಂಖ್ಯೆ 9731251411 ಇಲ್ಲಿ ನೋಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement