ಬೆಂಗಳೂರು: ನಾಯಿ ಮಾಂಸದ ಮೇಲೆ ಹೆಚ್ಚುತ್ತಿದೆ ಅನುಮಾನ! ಹಲವು ಹೋಟೆಲ್‌ ಮಾಲಿಕರಿಗೆ ನೋಟೀಸ್‌

ಬೆಂಗಳೂರು: ಬೆಂಗಳೂರಿನಲ್ಲಿ ಕಳಪೆ ಮಾಂಸ (Poor meat) ಉಣಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವು ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ (Hotel Owners) ಮಾಲೀಕರಿಗೆ ನೊಟೀಸ್ (Notice) ನೀಡಲಾಗಿದೆ. ಅಬ್ದುಲ್‌ ರಜಾಕ್‌ (Abdul Razak)…

ಬೆಂಗಳೂರು: ಬೆಂಗಳೂರಿನಲ್ಲಿ ಕಳಪೆ ಮಾಂಸ (Poor meat) ಉಣಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವು ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ (Hotel Owners) ಮಾಲೀಕರಿಗೆ ನೊಟೀಸ್ (Notice) ನೀಡಲಾಗಿದೆ. ಅಬ್ದುಲ್‌ ರಜಾಕ್‌ (Abdul Razak) ಆಮದು ಮಾಡುತ್ತಿರುವುದು ನಾಯಿ ಮಾಂಸ (Dog Meat) ಎಂಬ ಆರೋಪ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ (Health Department) ಅಧಿಕಾರಿಗಳು ಚುರುಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ.

ಮೊದಲ ಹಂತವಾಗಿ ಒಂಬತ್ತು ಜನ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದೆ. ಇವರು ಅಬ್ದುಲ್ ರಜಾಕ್ ಅವರಿಂದ ಮಾಂಸ ಪಡೆಯುತ್ತಿದ್ದ ಹೋಟೆಲ್‌, ರೆಸ್ಟೋರೆಂಟ್‌ಗಳು. ಈ ಸಂಬಂಧ ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ನಿನ್ನೆ‌ ಇಬ್ಬರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ನಿನ್ನೆ‌ ಅಬ್ದುಲ್ ರಜಾಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೋಮವಾರವೂ ವಿಚಾರಣೆ ಮುಂದುವರಿಯಲಿದೆ. ಡೆಸಿಗ್ನೇಟ್ ಆಫೀಸರ್ ಡಾ. ಜನಾರ್ದನ್ ಅವರಿಂದ ವಿಚಾರಣೆ ನಡೆಯುತ್ತಿದೆ. ನಿನ್ನೆ ಐದಾರು ಗಂಟೆಗಳ ಕಾಲ ಅಬ್ದುಲ್ ರಜಾಕ್ ವಿಚಾರಣೆ ಎದುರಿಸಿದ್ದರು. ಸೋಮವಾರ ಕೂಡ ವಿಚಾರಣೆಗೆ ಬರುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.