ಆಸ್ಪತ್ರೆಯಲ್ಲಿನ ರೋಗಿಗಳ ಮತಾಂತರಕ್ಕೆ ಎಂಬಿಬಿಎಸ್‌ ವಿದ್ಯಾರ್ಥಿಯಿಂದ ಯತ್ನ: ದೂರು ದಾಖಲು

ಕಲಬುರಗಿ: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕೇರಳ ಮೂಲದ ವೈದ್ಯ ವಿದ್ಯಾರ್ಥಿಯೊಬ್ಬ ಮತಾಂತರ ಮಾಡಲು ಯತ್ನಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಇಂಜೆಕ್ಷನ್‌ನಿಂದ ರೋಗ ನಿವಾರಣೆ ಆಗುವುದಿಲ್ಲ. ಬದಲಾಗಿ ಕ್ರೈಸ್ತ್ ಧರ್ಮಕ್ಕೆ ಬನ್ನಿ…

ಕಲಬುರಗಿ: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕೇರಳ ಮೂಲದ ವೈದ್ಯ ವಿದ್ಯಾರ್ಥಿಯೊಬ್ಬ ಮತಾಂತರ ಮಾಡಲು ಯತ್ನಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಇಂಜೆಕ್ಷನ್‌ನಿಂದ ರೋಗ ನಿವಾರಣೆ ಆಗುವುದಿಲ್ಲ. ಬದಲಾಗಿ ಕ್ರೈಸ್ತ್ ಧರ್ಮಕ್ಕೆ ಬನ್ನಿ ಏಸು ರೋಗ ವಾಸಿಮಾಡುತ್ತಾರೆ’ ಎಂದು ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ರೋಗಿಗಳ ಮೈಂಡ್‌ವಾಶ್‌ ಮಾಡಿ ಮತಾಂತರ ಮಾಡಲು ಯತ್ನಿಸಿದ್ದು, ಹಿಂದೂ ಸಂಘಟನೆಗಳು ಆತನ ವಿರುದ್ಧ ದೂರು ನೀಡಿವೆ.

ನಗರದಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕೇರಳ ಮೂಲದ ಹಿನೋ ಡಾಲಿಚಾನ್ ಎಂಬ ಎಂಬಿಬಿಎಸ್​ ವಿದ್ಯಾರ್ಥಿ ಕ್ರೈಸ್ತ​ ಧರ್ಮದ ಕರಪತ್ರ ನೀಡಿ ಮತಾಂತರಕ್ಕೆ ಪ್ರೆರೇಪಿಸಿದ್ದಾನೆ. ಈ ವಿಡಿಯೋ ವೈರಲ್​ ಆದ ಕೂಡಲೇ ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿ ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vijayaprabha Mobile App free

ಬ್ಯಾಗ್ ಒಳಗೆ ಪ್ರಚಾರ ಸಾಮಗ್ರಿ:

ಹಿಂದೂ ಕಾರ್ಯಕರ್ತರು ವಿದ್ಯಾರ್ಥಿಯ ಬ್ಯಾಗ್​ ಪರಿಶೀಲಿಸಿದಾಗ ಕ್ರೈಸ್ತ​ ಧರ್ಮದ ಪ್ರಚಾರ ಸಾಮಗ್ರಿ, ಮಳಯಾಳಂ ಮತ್ತು ಕನ್ನಡದಲ್ಲಿ ಬರೆದಿರುವ ಪುಸ್ತಕ ಪತ್ತೆಯಾಗಿವೆ. ‘ಔಷಧ ಹಾಗೂ ಇಂಜೆಕ್ಷನ್‌ನಿಂದ ನಿಮ್ಮ ರೋಗ ವಾಸಿಯಾಗುವುದಿಲ್ಲ. ಬದಲಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಬನ್ನಿ, ಏಸುವಿನ ದಾರಿಯಲ್ಲಿ ನಡೆದು ನಿಮ್ಮ ರೋಗಗಳನ್ನು ದೂರ ಮಾಡಿಕೊಳ್ಳಿ’ ಎಂದು ರೋಗಿಗಳನ್ನು ಮಂತಾತರ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಿ ಹಿನೋ ಡಾಲಿಚಾನ್ ವಿರುದ್ಧ ಕಲಬುರಗಿ ವಿಶ್ವ ವಿದ್ಯಾಲಯದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.