ಡಾ.ರಾಜ್ ಫ್ಯಾಮಿಲಿಗೂ ತಟ್ಟಿದ Deepfake; ಅಪ್ಪು ಪತ್ನಿ ಅಶ್ವಿನಿ ನಕಲಿ ಅಶ್ಲೀಲ ವಿಡಿಯೊ ವೈರಲ್

Ashwini Puneet Rajkumar : ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರನ್ನು ಕಾಡಿದ್ದ Deepfake (ಅಶ್ಲೀಲ) ವಿಡಿಯೊ ಭೀತಿ ಡಾ.ರಾಜ್ ಫ್ಯಾಮಿಲಿಗೂ ಕಾಡಲಾರಂಭಿಸಿದೆ. ಹೌದು, ಯೋಗೇಂದ್ರ ಪ್ರಸಾದ್‌ ಎಂಬ ಟ್ವಿಟರ್‌…

Ashwini Puneet Rajkumar : ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರನ್ನು ಕಾಡಿದ್ದ Deepfake (ಅಶ್ಲೀಲ) ವಿಡಿಯೊ ಭೀತಿ ಡಾ.ರಾಜ್ ಫ್ಯಾಮಿಲಿಗೂ ಕಾಡಲಾರಂಭಿಸಿದೆ.

ಹೌದು, ಯೋಗೇಂದ್ರ ಪ್ರಸಾದ್‌ ಎಂಬ ಟ್ವಿಟರ್‌ ಖಾತೆಯಲ್ಲಿ ಅಪ್ಪು ಪತ್ನಿ ಅಶ್ವಿನಿಯವರ ನಕಲಿ ವಿಡಿಯೋ ಅಪ್ಲೋಡ್ ಮಾಡಿ ಕೆಟ್ಟದ್ದಾಗಿ ಬರೆಯಲಾಗಿದೆ. ‘ಗಂಡ ಸತ್ತ ಮು** ಅಶ್ವಿನಿ ಅವರಿಗೆ ಬಾಳು ಕೊಡಲು ನಿರ್ಧರಿಸಿದ್ದೇನೆ ಎಂದು ಬರೆಯಲಾಗಿದೆ.

ಇನ್ನು, 29 ಅಕ್ಟೋಬರ್ 2024ರಂದು ನಾನು ವಿವಾಹವಾಗಲಿದ್ದು, ಅಪ್ಪು ಅಭಿಮಾನಿಗಳು ಬಂದು ಆಶೀರ್ವದಿಸಬೇಕು’ ಎಂದು ಕೀಳಾಗಿ ಪೋಸ್ಟ್ ಮಾಡಿದ್ದಾನೆ.

Vijayaprabha Mobile App free

ದೊಡ್ಮನೆ ಸೊಸೆಯ ನಕಲಿ ಅಶ್ಲೀಲ ವಿಡಿಯೊ ಹಂಚಿದಾತ ಯಾರು?

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಅಶ್ಲೀಲ ನಕಲಿ ವಿಡಿಯೊವನ್ನು ಯೋಗೇಂದ್ರ ಪ್ರಸಾದ್ ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಆತ ಕೇವಲ 100 ಫಾಲೋವರ್ಸ್‌ ಹೊಂದಿದ್ದು, ತಾನು ರಾಜವಂಶದ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ.

ಅಲ್ಲದೆ ತಾನು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ, ಬಿನ್ನಿ ಪೇಟೆ ಘಟಕದ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದಾನೆ. ಆತನ ಅಸಲಿ ಮುಖ ಯಾವುದೆಂದು ಪೊಲೀಸರು ಪತ್ತೆ ಹಚ್ಚಬೇಕಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.