ವಾಷಿಂಗ್ಟನ್: ಸದ್ಯ ವಿಶ್ವದ ಚಿತ್ತ ಅಮೆರಿಕದತ್ತ ನೆಟ್ಟಿದೆ. ಕಾರಣ ಬಹು ಪ್ರಮುಖವಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಯಾರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎನ್ನುವುದರ ಮೇಲೆ ಜಾಗತಿಕ ವಿದ್ಯಮಾನಗಳ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಯಾವ ಅಭ್ಯರ್ಥಿಯ ಪರ ಭಾರತೀಯರ ಒಲವು ಇದೆ ಎನ್ನುವ ಕುತೂಹಲವಿದ್ದರೆ ಈ ಸಮೀಕ್ಷೆ ಗಮನಿಸಿ.
ಹೌದು, ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವ ಅಮೆರಿಕದ ಡೆಮಾಕ್ರೆಟ್ ಪಕ್ಷದ ಪರ ಭಾರತೀಯರ ಒಲವು ಇಳಿಕೆಯಾಗಿರುವುದು ಕಂಡುಬಂದಿದೆ. ಮತ್ತೊಂದೆಡೆ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪರವಾಗಿ ಒಲವು ಹೆಚ್ಚಾಗಿದೆ. ಆದರೂ ಒಟ್ಟಾರೆ ಬಹುತೇಕ ಭಾರತೀಯರು ಕಮಲಾ ಹ್ಯಾರಿಸ್ ಪರ ಮತ ಚಲಾಯಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಭಾರತೀಯರ ಅಮೆರಿಕರನ್ನು ಗುರಿಯಾಗಿಸಿ ನಡೆಸಿದ ಅನ್‌ಲೈನ್ ಸಮೀಕ್ಷೆಯೊಂದರ ವೇಳೆ ಶೇ.61ರಷ್ಟು ಅಮೆರಿಕನ್ ಭಾರತೀಯರು ಡೆಮಾಕ್ರೆಟ್ ಪಕ್ಷದ ಪರ ಮತ್ತು ಶೇ.32ರಷ್ಟು ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ. ಆದರೆ 2020ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಗಮನಿಸಿದರೆ, ಈ ಬಾರಿ ಕಮಲಾ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ ಪರ ಸ್ವಲ್ಪ ಏರಿದ್ದು ಕಂಡುಬಂದಿದ ಎಂದು ಸಮೀಕ್ಷೆ ಹೇಳಿದೆ. ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಿದ್ದಾರೆ.