ಬೆಂಗಳೂರು: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮದ್ಯಗಳು ಲಭ್ಯವಾಗಲಿವೆ. ಪ್ರೀಮಿಯಂ ಮದ್ಯದ ಮೇಲೆ ಗರಿಷ್ಠ 600 ರೂ.ವರೆಗೆ ದರ ಇಳಿಯಲಿದೆ. ಜತೆಗೆ, ಬಿಯರ್ ಬಾಟಲ್ ಮೇಲೆ 20 ರೂ. ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ 32ಕ್ಕಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳು ಬ್ಯಾಂಡ್‌ನಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ಮಾರಾಟ ಮಾಡುತ್ತಿವೆ. ಬ್ರಾಂಡ್ ಗಳ ಬೆಲೆಯ ಅನುಸಾರ 18 ಸ್ಟ್ರಾಬ್‌ಗಳಾಗಿ ವಿಂಗಡಿಸಲಾಗಿದೆ. 1ರಿಂದ 5ನೇ ಸ್ಟ್ರಾಬ್‌ವರೆಗಿನ ಸ್ವಾಬ್‌ವರ ಶೇ.75, 6ರಿಂದ 12ನೇ ಸ್ಟ್ರಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ.20 ಹಾಗೂ 13ರಿಂದ 18ವರೆಗಿನ ಸ್ಟ್ರಾಬ್‌ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ.5 ಆದಾಯ ಸರ್ಕಾರಕ್ಕೆ ಬರುತ್ತದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರೀಮಿಯಂ ಸ್ಟ್ರಾಬ್ ಮದ್ಯದ ದರ ದುಬಾರಿಯಾಗಿತ್ತು.
ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿತ್ತು. ಗಡಿ ಭಾಗದ ಜಿಲ್ಲೆಗಳ ಜನರು, ನೆರೆಯ ರಾಜ್ಯಗಳಿಗೆ ತೆರಳಿ ಖರೀದಿಸುತ್ತಿದ್ದರು. ಇದರಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಮಾರಾಟ ಹೆಚ್ಚಿಸಿ ಆದಾಯ ಗಳಿಸುವ ಉದ್ದೇಶದಿಂದ ಸರ್ಕಾರ, ಹೆಚ್ಚುವರಿ ಅಬಕಾರಿ ಸುಂಕ (ಇಎಡಿ) ಪರಿಷ್ಕರಿಸಿ ಪ್ರೀಮಿಯಂ ಮದ್ಯದ ದರ ಇಳಿಸಿದೆ.
ಬಿಯರ್ ದರ ಪರಿಷ್ಕರಣೆ ವಿವರಬ್ರಾಂಡ್ ಹಿಂದಿನ ದರ ಈಗಿನ ದರಬುಲೆಟ್ 120 150ಎಲ್‌ಪಿಎಸ್ 130 155ಯುಬಿ 145 160ಕೆಎಫ್‌ಎಸ್ 185 195ಕೆಎಫ್ಯುಎಂ 235 245ಬಿಯುಡಿ 235 245ಹೈವಾಡ್ಸ್ 135 155ನಾಕ್‌ಔಟ್ 170 180ರಾಯಲ್ಚಾಲೆಂಜ್ 120 150
ಸತತ 4ನೇ ಬಾರಿ ಬಿಯರ್ ಬೆಲೆ ಹೆಚ್ಚಳ:ಕಾಂಗ್ರೆಸ್ ಸರ್ಕಾರ ಸತತ 4ನೇ ಬಾರಿ ಬಿಯರ್ ದರ ಹೆಚ್ಚಿಸಿದೆ. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿಯೂ ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಸುಂಕ ಹೆಚ್ಚಿಸಿತ್ತು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಮೇಲೆ ಹೆಚ್ಚುವರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಇದೀಗ ಬಾಟಲ್ ಮೇಲೆ 20 ರೂ. ಹೆಚ್ಚಿಸಲಾಗಿದೆ. ಶೇ.5ಕ್ಕಿಂತ ಕೆಳಗೆ ಅಕ್ಕೋಹಾಲ್ ಪ್ರಮಾಣವಿದ್ದರೆ ಒಂದು ತೆರಿಗೆ, ಶೇ.5ರಿಂದ ಶೇ.6.5ರವರೆಗೆ ಶೇ.6.5ರಿಂದ ಶೇ.8ರವರೆಗೆ ಅಲೋಹಾಲ್ ಪ್ರಮಾಣದಲ್ಲಿ ಒಂದು ಬಗೆಯ ತೆರಿಗೆ ಇರಲಿದೆ.
ಗರಿಷ್ಠ 600 ರೂ. ಇಳಿಕೆ:
ಪುಲ್ ಬಾಟಲ್ ರಮ್, ವಿಸ್ಕಿ, ಬ್ರಾಂಡಿ ಮೇಲೆ 500-600 ರೂ ವರೆಗೆ ದರ ಕಡಿಮೆ
ಇತರ ಪ್ರೀಮಿಯಂ ಮದ್ಯದ ಬಾಟಲ್ ಗಳ ಮೇಲೆ ಕನಿಷ್ಠ 400 ರೂ.ನಿಂದ ಗರಿಷ್ಠ 600 ರೂ. ಇಳಿಕೆ
18 ಸ್ಲಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಸಲಾಗಿದೆ. ಮೊದಲ 3 ಸ್ಟ್ರಾಬ್‌ಗಳಲ್ಲಿ ದರ ವ್ಯತ್ಯಸವಾಗಿಲ್ಲ
4ನೇ ಸ್ಲಾಬ್‌ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆ. 4 5 ↑ ಫ್ಲ್ಯಾಬ್‌ನಿಂದ 16ನೇ ಸ್ಥಾಬ್‌ವರೆಗೆ
ಬಿಯರ್ ಮೇಲೆ ವರ್ಷಕ್ಕೆ 4ನೇ ಬಾರಿ ದರ ಹೆಚ್ಚಿಸಲಾಗಿದೆ. ಪ್ರೀಮಿಯಂ ಮದ್ಯದ ದರ ಇಳಿಕೆ ಮಾಡಿದರೂ ನೆರೆರಾಜ್ಯಗಳಿಗೆ ಹೋಲಿಸಿದರೂ ಸಮನಾಗಿಲ್ಲ. ದರ ಇಳಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಬಿಯರ್ ಉತ್ತೇಜನಕ್ಕೆ ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. – ಕರುಣಾಕರ ಹೆಗ್ಡೆ ಉಪಾಧ್ಯಕ್ಷ, ರಾಜ್ಯ ಮದ್ಯ ಮಾರಾಟ ಒಕ್ಕೂಟ