₹49 ಕೋಟಿಗೆ ನಟಿ ಸೋನಂ ಕಪೂರ್‌ ಪಾಲಾದ ನೀರವ್‌ ಮೋದಿಯ ‘ರಿದಂ ಹೌಸ್‌’

ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್‌ ತನ್ನ ಪತಿ ಉದ್ಯಮಿ ಆನಂದ್‌ ಅಹುಜಾ ಅವರೊಂದಿಗೆ ಮುಂಬೈನಲ್ಲಿ ಈ ಹಿಂದೆ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಒಡೆತನಕ್ಕೆ ಸೇರಿದ್ದ ಮ್ಯೂಸಿಕ್ ಸ್ಟೋರ್‌ ‘ರಿದಂ ಹೌಸ್‌’ ಅನ್ನು…

ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್‌ ತನ್ನ ಪತಿ ಉದ್ಯಮಿ ಆನಂದ್‌ ಅಹುಜಾ ಅವರೊಂದಿಗೆ ಮುಂಬೈನಲ್ಲಿ ಈ ಹಿಂದೆ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಒಡೆತನಕ್ಕೆ ಸೇರಿದ್ದ ಮ್ಯೂಸಿಕ್ ಸ್ಟೋರ್‌ ‘ರಿದಂ ಹೌಸ್‌’ ಅನ್ನು 49 ಕೋಟಿ ರುಪಾಯಿಗೆ ಖರೀದಿ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, 3600 ಚದರ ಅಡಿ ಇರುವ ಈ ಅಂಗಡಿಯ ಮೌಲ್ಯ ₹49 ಕೋಟಿ. ಇದನ್ನು ಸೋನಂ ಒಡೆತನದ ಭಾನೆ ಗ್ರೂಪ್‌ ಖರೀದಿಸಿದೆ ಎಂದು ದೃಢೀಕರಿಸಿದ್ದಾರೆ.

ಉದ್ಯಮಿ ನೀರವ್‌ ಮೋದಿ ದೇಶ ಬಿಟ್ಟು ಓಡಿ ಹೋದ ನಂತರ 2018ರಲ್ಲಿ ಈ ಕಟ್ಟಡವನ್ನು ಕೋರ್ಟ್‌ ಆದೇಶಾನುಸಾರ ಸರ್ಕಾರ ವಶಪಡಿಸಿಕೊಂಡಿತ್ತು. ಸಾಲ ತಿರಿಸದೇ ಆತ ಓಡಿ ಹೋದ ಕಾರಣ ಅದನ್ನು ಈಗ ಮಾರಾಟ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Vijayaprabha Mobile App free

ಮಹಾರಾಷ್ಟ್ರದಲ್ಲಿ ಇರುವ ಈ ರಿದಂ ಹೌಸ್ ಅನ್ನು ಸಂಗೀತಲೋಕದ ಮೆಕ್ಕಾ ಎನ್ನುತ್ತಾರೆ. ಇಲ್ಲಿ ಅತಿ ಪುರಾತನ ಹಾಡುಗಳ ಸೀಡಿಗಳು ಲಭ್ಯ ಇವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.