ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ತಮ್ಮ ನಿವಾಸ ಮತ್ತು ಫಾರ್ಮ್ ಹೌಸ್ ಅನ್ನು ಖಾಲಿ ಮಾಡುವಂತೆ ನೀಡಿರುವ ನೋಟಿಸ್ ವಿರುದ್ಧ ದಂಪತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ಪೀಠವು, ನಿವಾಸ ಖಾಲಿಗೆ ನೀಡಿರುವ ನೋಟಿಸ್‌ಗಳನ್ನು ಪ್ರಶ್ನಿಸಿ ಶೆಟ್ಟಿ ಮತ್ತು ಕುಂದ್ರಾ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿದರು. ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದ ನಂತರ ಮರುದಿನ ವಿಚಾರಣೆಗೆ ಮುಂದೂಡಲಾಯಿತು.
ಇಡಿ ಲಗತ್ತಿಸಿರುವ ಆಸ್ತಿಗಳಲ್ಲಿ ಶೆಟ್ಟಿ ಅವರ ಹೆಸರಿನಲ್ಲಿ ಜುಹುದಲ್ಲಿ ಫ್ಲಾಟ್, ಪುಣೆಯಲ್ಲಿ ಬಂಗಲೆ ಮತ್ತು ಕುಂದ್ರಾ ಅವರ ಹೆಸರಿನಲ್ಲಿ ಈಕ್ವಿಟಿ ಷೇರುಗಳು ಸೇರಿವೆ. ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್, ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಮತ್ತು ಹಲವಾರು ಮಾರ್ಕೆಟಿಂಗ್ ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ದಾಖಲಿಸಿರುವ ವಿವಿಧ ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ತನ್ನ ತನಿಖೆಯನ್ನು ಪ್ರಾರಂಭಿಸಿದೆ.
ಏಪ್ರಿಲ್‌ನಲ್ಲಿ ಇಡಿ ಮುಂಬೈ ವಲಯ ಕಚೇರಿಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶೆಟ್ಟಿ ಮತ್ತು ಕುಂದ್ರಾ ಅವರಿಗೆ ಸೇರಿದ 97.79 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಆರೋಪಿಗಳು ಬಿಟ್‌ಕಾಯಿನ್ ವ್ಯವಹಾರದಲ್ಲಿ ತೊಡಗಿದ್ದು, ಸಾರ್ವಜನಿಕರಿಂದ 2017 ರಲ್ಲಿ 6,600 ಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿದ್ದಾರೆ. 10% ಮಾಸಿಕ ಆದಾಯದ ಸುಳ್ಳು ಭರವಸೆಯನ್ನು ಹೂಡಿಕೆದಾರರಿಗೆ ನೀಡಿದ್ದಾರೆ ಎಂದು ಇಡಿ ಆರೋಪಿಸಿತ್ತು.
‘ಕಕ್ಷಿದಾರರು ಮಾನವೀಯ ಆಧಾರದ ಮೇಲೆ ಪರಿಹಾರವನ್ನು ಬಯಸುತ್ತಿದ್ದಾರೆ. ಅವರು ಸುಮಾರು ಎರಡು ದಶಕಗಳಿಂದ ಆರು ಸದಸ್ಯರ ಕುಟುಂಬದೊಂದಿಗೆ ವಾಸಿಸುತ್ತಿರುವ ಅವರ ವಸತಿ ಇದಾಗಿದೆ’ ಎಂದು ಶೆಟ್ಟಿ ಮತ್ತು ಕುಂದ್ರಾ ಪರ ವಕೀಲರು ವಾದಿಸಿದರು.
ಇಡಿ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಪೀಠ, ನಿವೇಶನಗಳನ್ನ ಖಾಲಿ ಮಾಡಿಸುವುದು ಸಾಮಾನ್ಯವಾಗಿ ವಿಚಾರಣೆಯ ನಂತರ ನಡೆಯುವ ಪ್ರಕ್ರಿಯೆ. ಆಸ್ತಿಗಳ ಲಗತ್ತು ಕೇವಲ ತಾತ್ಕಾಲಿಕ ಪ್ರಕ್ರಿಯೆ. ಹೀಗಾಗಿ ಸದ್ಯ ಆಸ್ತಿ ಜಪ್ತುಮಾಡಿಕೊಳ್ಳದಂತೆ ಅವಕಾಶವಿದ್ದರೆ ತಿಳಿಸಲು ಇಡಿಗೆ ನ್ಯಾಯಾಲಯವು ಸೂಚಿಸಿತು.