Actor Darshan and Yuvraj case: ಕನ್ನಡ ಚಿತ್ರರಂಗ ಈಗ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಒಂದೆಡೆ ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಇನ್ನೊಂದೆಡೆ ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಪಡೆಯಲು ಬಯಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಟ ಯುವ ರಾಜ್‌ಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅದೇ ರೀತಿ ದರ್ಶನ್ ಅವರ ನ್ಯಾಯಾಂಗ ಬಂಧನವು ಇಂದು ಮುಕ್ತಾಯ ಆಗುತ್ತಿದ್ದು, ಅವರನ್ನು ಕೂಡ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಇದನ್ನು ಓದಿ: UNION BANK ನೇಮಕಾತಿ: 10th ಪಾಸ್ ಆಗಿದ್ದರೆ ಸಾಕು ಕೂಡಲೇ ಅರ್ಜಿ ಸಲ್ಲಿಸಿ
ಅಮೆರಿಕಾಗೆ ವಾಪಸ್ ಹೋದ್ರಾ ಶ್ರೀದೇವಿ ಭೈರಪ್ಪ?.. ಕುತೂಹಲ ಕೆರಳಿಸಿದ ಪೋಸ್ಟ್
ಡಾ. ರಾಜ್‌ಕುಮಾರ್ ವಂಶದ ಕುಡಿ, ನಟ ಯುವ ರಾಜ್‌ಕುಮಾರ್ ತಮ್ಮ ಪತ್ನಿ ಶ್ರೀದೇವಿ ಭೈರಪ್ಪಗೆ ವಿಚ್ಛೇದನ ನೀಡಿದ್ದು, ಈ ನೋಟಿಸ್ ಸಂಬಂಧ ಅಮೆರಿಕಾದಿಂದ ಬಂದಿದ್ದರು ಶ್ರೀದೇವಿ ಭೈರಪ್ಪ,.
ಆದರೆ, ಇದೀಗ ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸಲು ವಾಪಸ್ ಹೋಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ವಾಪಸ್ ಬರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಅವರು ಇಂದು ವಿಚಾರಣೆಗೆ ಗೈರು ಹಾಜರಾಗಲಿದ್ದಾರಾ ಎಂಬ ಅನುಮಾನ ಮೂಡಿದೆ.
ಇದನ್ನು ಓದಿ: ದರ್ಶನ್‌ಗೆ ನಾನೊಬ್ಬಳೆ ಪತ್ನಿ ಪವಿತ್ರಾಗೌಡ ಅಲ್ಲ: ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಪತ್ರ!