ನವದೆಹಲಿ: ರಾಷ್ಟ್ರದಲ್ಲಿ ಆಧುನಿಕ ಅಭಿವೃದ್ಧಿಯ ನಡುವೆಯೂ ಬಡತನ ಕಡಿಮೆಯಾಗಿಲ್ಲ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
ಭಾರತ ಸ್ವಾತಂತ್ರ್ಯ ನಂತರ ಹಲವರು ಏರಿಳಿತಗಳನ್ನು ಕಂಡಿದ್ದು, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಗಡಿ ಸಮಸ್ಯೆಗಳ ನಡುವೆಯೂ ವಿಶ್ವದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ ಮತ್ತು ಮೂಡಿಸುತ್ತಿದೆ. ಆದರೆ ಇತ್ತೀಚೆಗೆ ವಿಶ್ವಬ್ಯಾಂಕ್ ವರದಿಯೊಂದನ್ನು ಪ್ರಕಟಿಸಿದ್ದು, ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇನ್ನೂ12.9 ಕೋಟಿ ಜನರು ಕಡು ಬಡತನ ಅನುಭವಿಸುತ್ತಿದ್ದಾರೆ.
ಹೀಗಿದ್ದರೂ ಸಹ 2021ಕ್ಕೆ ಹೋಲಿಕೆ ಮಾಡಿದರೆ ಬಡತನ ಪ್ರಮಾಣ ಕಡಿಮೆಯಾಗಿದ್ದು, 3.8 ಕೋಟಿಯಷ್ಟು ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ಅಂಕಿ ಅಂಶಗಳು ಹೇಳುತ್ತಿವೆ.
ಕಡಿಮೆ ಆದಾಯ:
ವಿಶ್ವಬ್ಯಾಂಕ್ ವರದಿ ಪ್ರಕಾರ, ‘ಭಾರತದಲ್ಲಿ ಪ್ರಸ್ತಕ ವರ್ಷದಲ್ಲಿ 12.9 ಕೋಟಿ ಜನರು ದಿನಕ್ಕೆ 181 ರು.ಗಿಂತಲೂ ಕಡಿಮೆ ಆದಾಯವನ್ನು ಹೊಂದಿದ್ದಾರೆ. 2021ರಲ್ಲಿ ಭಾರತದಲ್ಲಿ ಬಡತನದ ಪ್ರಮಾಣ 16.7 ಕೋಟಿಯಷ್ಟಿತ್ತು. ಆದರೆ 2 ವರ್ಷಗಳಲ್ಲಿ ಈ ಪ್ರಮಾಣ 3.8 ಕೋಟಿಯಷ್ಟು ಇಳಿಕೆಯಾಗಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ’ ಎಂದು ಹೇಳಿದೆ.
ಸ್ವಲ್ಪ ಸಮಾಧಾನ:
ಭಾರತದಲ್ಲಿ 12.9 ಕೋಟಿ ನಾಗರಿಕರು ತೀವ್ರ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ವರದಿ ಹೇಳಿದ್ದರೂ 3.8 ಕೋಟಿಯಷ್ಟು ಜನರು ಬಡತನದಿಂದ ಹೊರ ಬಂದಿದ್ದಾರೆ ಎನ್ನುವುದು ರಾಷ್ಟ್ರವೂ ಅವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.