Maharishi Valmiki : ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ರಾಮಾಯಣವು ಲವ-ಕುಶರಿಂದ ಪ್ರಚಲಿತವಾಯಿತು. ಈ ವಾಲ್ಮೀಕಿ ರಾಮಾಯಣದಲ್ಲಿ ರಾಮನ ಜನನದಿಂದ ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳುಕಾಂಡಗಳಾಗಿ ವಿಭಜಿಸಲಾಗಿದ್ದು, ಈ ಕಾವ್ಯದ ಮೂಲಕ ಜನರನ್ನು ಸರಿಯಾದ ಮಾರ್ಗದಲ್ಲಿ ನಡೆಯಲು ಪ್ರೇರೆಪಿಸಿದರು.
ಮುನಿಯ ಪುತ್ರ
ಮಹರ್ಷಿ ವಾಲ್ಮೀಕಿಯ ಜನನದ ಬಗ್ಗೆ ಅನೇಕ ಅಭಿಪ್ರಾಯಗಳಿವೆ, ಹಲವರ ಪ್ರಕಾರ ಅವರು ಮಹರ್ಷಿ ಕಶ್ಯಪರ 9 ನೇ ಮಗ ವರುಣರ ಪುತ್ರ. ಅಲ್ಲದೇ ವಾಲ್ಮೀಕಿಯು ಬ್ರಹ್ಮ ಮಾನಸ ಪುತ್ರ ಪ್ರಚೇತಾರ ಮಗನೆಂದು ಕೆಲವು ಗ್ರಂಥಗಳು ಹೇಳುತ್ತವೆ.
ವಂಚಕನಾಗಿ ಬೆಳೆದ ಬಾಲಕ
ಅವರ ಬಾಲ್ಯದಲ್ಲಿ, ಭಿಲ್ ಸಮುದಾಯದ ಜನರು ಅವರನ್ನು ಅಪಹರಿಸಿದರು ಎಂದು ಹೇಳಲಾಗುತ್ತದೆ. ಬಳಿಕ ಅವರನ್ನು ಅಲ್ಲಿಯೇ ಬೆಳೆಸಲಾಯಿತು. ವಾಲ್ಮೀಕಿ ಅವರನ್ನು ರತ್ನಾಕರ ಎಂದು ಕರೆಯಲಾಗುತ್ತಿತ್ತು. ರತ್ನಾಕರ ಲೂಟಿ, ಕಳ್ಳತನದಂತಹ ತಪ್ಪು ಕೆಲಸಗಳನ್ನು ಮಾಡುವ ವಂಚಕನಾಗಿದ್ದರು.
ನಾರದರಿಂದ ಪರಿವರ್ತನೆ
ಒಮ್ಮೆ ನಾರದರ ಮಾತಿನಿಂದ ವಾಲ್ಮೀಕಿಯು ತನ್ನ ತಪ್ಪುಗಳನ್ನು ಅರಿತುಕೊಂಡು ತಮ್ಮಲ್ಲಿ ಬದಲಾವಣೆ ತಂದುಕೊಂಡರು. ಅಧರ್ಮದ ಮಾರ್ಗವನ್ನು ಬಿಟ್ಟು ಧರ್ಮದ ಮಾರ್ಗವನ್ನು ಅಳವಡಿಸಿಕೊಂಡರು. ರಾಮನ ಹೆಸರನ್ನು ಜಪಿಸುವಂತೆ ನಾರದ ಮಹರ್ಷಿಯು ಅವರಿಗೆ ಸಲಹೆ ನೀಡಿದ್ದು, ರಾಮ ನಾಮದಲ್ಲಿ ಲೀನರಾಗುವ ಮೂಲಕ ಅವರು ತಪಸ್ವಿಯಾದರು.
ಹುತ್ತದಲ್ಲಿ ತಪಸ್ಸು
ದಂತಕಥೆಯ ಪ್ರಕಾರ, ಮಹರ್ಷಿ ವಾಲ್ಮೀಕಿಯವರು ತಮ್ಮ ಧ್ಯಾನದಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರ ಇಡೀ ದೇಹವನ್ನು ಗೆದ್ದಲು ಆವರಿಸಿತ್ತು. ಆದರೂ ಧ್ಯಾನ ಮುಗಿಸಿದ ನಂತರವೇ ಮಹರ್ಷಿ ಕಣ್ಣು ತೆರೆದರು. ಗೆದ್ದಲು ಮನೆ ಮಾಡುವ ಸ್ಥಳ ಅಂದರೆ ಹುತ್ತವನ್ನು ವಾಲ್ಮೀಕ ಎಂದು ಕರೆಯಲಾಗುತ್ತದೆ. ಹಾಗಾಗಿ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು.
ಸೀತೆಗೆ ರಕ್ಷಣೆ
ಸೀತೆಮಾತೆಯನ್ನು ರಾಮನು ದೂರ ಇರಿಸಿದಾಗ, ಸೀತೆಮಾತೆಯನ್ನು ಮಹರ್ಷಿ ವಾಲ್ಮೀಕಿಯವರು ತಮ್ಮ ಆಶ್ರಮದಲ್ಲಿ ಇರಿಸಿಕೊಂಡರು. ಅಲ್ಲಿಯೇ ಸೀತೆಮಾತೆಯು ಲವ ಮತ್ತು ಕುಶ ಎನ್ನುವ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಲವ-ಕುಶರಿಗೆ ವಾಲ್ಮೀಕಿ ಮಹರ್ಷಿಗಳು ಉತ್ತಮ ವಿದ್ಯಾಭ್ಯಾಸವನ್ನು ನೀಡಿ, ಚೆನ್ನಾಗಿ ನೋಡಿಕೊಂಡಿದ್ದರು.
ವಾಲ್ಮೀಕಿಯ ಜೀವನ ಪಾಠಗಳು
- ತಾಯಿ ಮತ್ತು ತಾಯ್ಕಾಡು ಸ್ವರ್ಗಕ್ಕಿಂತ ಹೆಚ್ಚು.
- ಪ್ರತಿಜ್ಞೆಯನ್ನು ಮುರಿಯುವುದರಿಂದ, ಸದ್ಗುಣಗಳು ನಾಶವಾಗುತ್ತವೆ.
- ಸತ್ಯವು ಎಲ್ಲಾ ನಿಜವಾದ ಕ್ರಿಯೆಗಳ ಆಧಾರವಾಗಿದೆ.
- ಪೋಷಕರ ಸೇವೆ ಮತ್ತು ವಿಧೇಯತೆಗಿಂತ ಬೇರೆ ಯಾವುದೇ ಧರ್ಮವಿಲ್ಲ.
- ಅಹಂ ಮನುಷ್ಯನ ದೊಡ್ಡ ಶತ್ರು.