Papaya | ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಅಂಶ ಮತ್ತು ಪಪೈನ್ ಎಂಬ ಕಿಣ್ವ ಇರುವುದರಿಂದ ಗರ್ಭಿಣಿಯರು ಅದನ್ನು ಸೇವಿಸಬಾರದು. ಇದು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು, ಇದು ಗರ್ಭಪಾತ ಅಥವಾ ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ಇದಕ್ಕೆ ವಿರುದ್ಧವಾಗಿ, ಪಪ್ಪಾಯಿಯನ್ನು ಸಾಮಾನ್ಯವಾಗಿ ಮಿತವಾಗಿ ಸೇವಿಸಿದರೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು ಗರ್ಭಧಾರಣೆಗೆ ಪ್ರಯೋಜನಕಾರಿ ಪೋಷಕಾಂಶಗಳನ್ನು ನೀಡುತ್ತದೆ, ಆದರೂ ಅದನ್ನು ಆಹಾರದಲ್ಲಿ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗುತ್ತದೆ.

ಗರ್ಭಪಾತದ ಸಂಭವ
ಪಪ್ಪಾಯಿ ಸೇವನೆಯು ಗರ್ಭಪಾತ ಅಥವಾ ಅಕಾಲಿಕ ಶಿಶು ಜನನದಂತಹ ಅಪಾಯವನ್ನು ಹೆಚ್ಚಿಸಬಹುದು. ಪಪ್ಪಾಯಿಯು ಗರ್ಭಿಣಿಯರ ಆಮ್ಮಿಯೋಟಿಕ್ ಚೀಲವನ್ನು ಛಿದ್ರಗೊಳಿಸಲು ಅಥವಾ ದ್ರವದ ನಷ್ಟಕ್ಕೆ ಕಾರಣವಾಗಬಹುದು. ಹೀಗೆ ಭ್ರೂಣಕ್ಕೆ ಅಪಾಯವನ್ನು ಮಾಡುತ್ತದೆ.
ಹಾರ್ಮೋನುಗಳ ಅಸಮತೋಲನ
ಪಪ್ಪಾಯಿ ಹಣ್ಣು ದೇಹದಲ್ಲಿ ಈಸ್ಟೋಜೆನ್‌ನ ಪರಿಣಾಮಗಳನ್ನು ಅನುಕರಿಸುವ ಫೈಟೊಸ್ಟೋಜೆನ್ ಗಳನ್ನು ಹೊಂದಿರುತ್ತದೆ. ಗರ್ಭಿಣಿಯರು ಪಪ್ಪಾಯಿಗಳನ್ನು ಸೇವಿಸುವುದರಿಂದ ಹಾರ್ಮೋನುಗಳ ಅಸಮತೋಲನಕ್ಕೆ ಅಡ್ಡಿಪಡಿಸುವ ಸಂಭವವಿದೆ. ಇದರ ಪರಿಣಾಮವು ಮಗುವು ಕಡಿಮೆ ತೂಕ, ಭ್ರೂಣದ ಬೆಳವಣಿಗೆ ಕುಂಠಿತ ಅಥವಾ ಅವಧಿಪೂರ್ವ ಹೆರಿಗೆಯಾಗುವ ಸಂಭವವಿರುತ್ತದೆ.
ಮಾಗಿದ ಪಪ್ಪಾಯಿ
ಗರ್ಭಿಣಿಯಾದ ಮಹಿಳೆ ಪಪ್ಪಾಯಿ ಹಣ್ಣಿನ ಪ್ರೇಮಿಗಳಾಗಿದ್ದರೆ ಗರ್ಭಾವಸ್ಥೆಯಲ್ಲಿ ತ್ಯಜಿಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಒಂದೊಮ್ಮೆ ತಿನ್ನಲೇಬೇಕು ಎ೦ದು ಬಯಸಿದರೆ ಮಿತವಾಗಿ ಮಾಗಿದ ಪಪ್ಪಾಯಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಆಗ ಅಸ್ವಸ್ಥತೆ ಅಥವಾ ಅಲರ್ಜಿಯ ಪ್ರತಿಕ್ರಿಯೆ ಕಂಡು ಬ೦ದರೆ ತಕ್ಷಣ ಸೇವನೆ ನಿಲ್ಲಿಸಬೇಕು.
ತಿಳಿಯದೆ ತಿಂದರೆ
ಪಪ್ಪಾಯಿಯನ್ನು ಆಕಸ್ಮಿಕವಾಗಿ ತಿಳಿಯದೆ ತಿಂದರೆ ಗರ್ಭಿಣಿಯರು ತಿ೦ದರೆ ಹೆದರಬಾರದು. ಪಪ್ಪಾಯಿಯನ್ನು ಸೇವಿಸಿದ ನಂತರ ನೀವು ಅನುಭವಿಸಬಹುದಾದ ಯಾವುದೇ ಅಸಾಮಾನ್ಯ ಲಕ್ಷಣಗಳು ಅಥವಾ ಅಸ್ವಸ್ಥತೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಈ ಹಣ್ಣುಗಳು ಬೇಡ
ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಪಪ್ಪಾಯಿಯೊಂದಿಗೆ ಅನಾಸನ್, ಕಪ್ಪು ದ್ರಾಕ್ಷಿಗಳು, ಪೇರಳೆ, ಕಲ್ಲಂಗಡಿ ಮತ್ತು ಪೀಚ್ ಹಣ್ಣುಗಳು ಕೂಡ ಸೇರಿವೆ. ವಾಸ್ತವವಾಗಿ, ಈ ಹಣ್ಣುಗಳು ಭ್ರೂಣದ ಬೆಳವಣಿಗೆಗೆ ಮಾರಕವಾಗಿದೆ.



