ಪ್ರಜ್ಞೆ ಕಳೆದುಕೊಳ್ಳದೆ ಆಳವಾದ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಇದು ಒತ್ತಡ, ಹತಾಶೆ, ನಿದ್ರಾಹೀನತೆ, ಸ್ನಾಯುಬಿಗಿತ, ಭಾವನಾತ್ಮಕ ಮತ್ತು ಮಾನಸಿಕ ಉದ್ವಿಗ್ನತೆ ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ.
ಯೋಗಾ ನಿದ್ರಾ ಮಾಡಲು ಉತ್ತಮ ಮಾರ್ಗ ಎಂದರೆ ಶವಾಸನದಲ್ಲಿ ಮಲಗುವುದು. ನಿಮ್ಮನ್ನು ಬೆಚ್ಚಗಿಡಬಲ್ಲ ಬ್ಲಾಂಕೆಟ್ ಕೂಡಾ ಬಳಸಬಹುದು. ತಲೆದಿಂಬು ಮತ್ತು ಮಂಡಿಗಳ ಕೆಳಗೆ ಕೂಡಾ ಕೊಂಚ ಎತ್ತರವಾಗುವಂತೆ ಏನನ್ನಾದರೂ ಇಟ್ಟುಕೊಳ್ಳಬಹುದು. ಇಹಲೋಕದ ಪರಿವೆಯಿಲ್ಲದೆ ನಿದ್ರಿಸುವುದು ಯೋಗ ನಿದ್ರೆ ಅಲ್ಲ.
ಮಧ್ಯಾಹ್ನ ನಿದ್ರೆ ಮಾಡುವುದು ಎಷ್ಟು ಸರಿ?:
ಮಧ್ಯಾಹ್ನದ ಊಟದ ನಂತರ ಮಾಡುವ ಸಣ್ಣ ಪ್ರಮಾಣದ ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಒತ್ತಡ ದೂರ ಮಾಡುತ್ತದೆ.
ಈ ವಿಶ್ರಾಂತಿ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಧ್ಯಾಹ್ನ ಮಲಗುವವರು ಮಾನಸಿಕವಾಗಿ ಸಕ್ರಿಯರಾಗಿದ್ದಾರೆ. ಆದರೆ, ಈ ವಿಶ್ರಾಂತಿ ಸಮಯವು ಅರ್ಧ ಗಂಟೆ ಮತ್ತು 2 ಗಂಟೆಗಳ ನಡುವೆ ಇರಬೇಕು.