ಬೆಂಗಳೂರು: ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ ಬಹುಭಾಷಾ ನಟಿ ಅಮಲಾ ಪೌಲ್ ಅವರು ಆಯುರ್ವೇದ ಚಿಕೆತ್ಸೆಗೆ ಮರೆಹೋಗಿದ್ದು, ಆರೋಗ್ಯದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಮಲಾ ಪೌಲ್ ಅವರು ನಮ್ಮ ಪೂರ್ವಜರು ಆರೋಗ್ಯವು ಒಂದು ಕ್ರಮ ಮತ್ತು ಅನಾರೋಗ್ಯವು ಒಂದು ಕಾಯಿಲೆ ಎಂದು ಹೇಳಿದರು. ಅನಾರೋಗ್ಯ ಏಕೆ ಬರುತ್ತದೆ ಎಂದು ನೀವು ಕಂಡು ಹಿಡಿಯಲು ಸಾಧ್ಯವಾದರೆ, ಅದನ್ನು ಕ್ರಮವಾಗಿ ಇಡುವುದು ಸುಲಭವಾಗುತ್ತದೆ. ನಾನು ಇದೀಗ ಅದೇ ವಿಷಯವನ್ನು ಕಂಡುಕೊಳ್ಳುತ್ತಿದ್ದೇನೆ ”ಎಂದು ಅಮಲಪಾಲ್ ಹೇಳಿದರು.
ಸದ್ಯ ಅಮಲಾ ಪೌಲ್ ಅವರು ಆಯುರ್ವೇದ ಚಿಕಿತ್ಸೆಗೆ ಮರೆಹೋಗಿದ್ದು, ಪಂಚಕರ್ಮ ಚಿಕಿತ್ಸೆ ನೀಡಲಾಗುತ್ತಿದ್ದಾರೆ. ಇದು ಆಯುರ್ವೇದ ಚಿಕಿತ್ಸೆಯ ಒಂದು ಭಾಗವಾಗಿದೆ. ಈ 28 ದಿನಗಳ ಚಿಕಿತ್ಸಾ ಪ್ರಕ್ರಿಯೆಯಗಿದ್ದು, ಸುಮಾರು 20 ದಿನಗಳನ್ನು ಅವರು ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಮಲಾ ಪಾಲ್, “ಆಯುರ್ವೇದದೊಂದಿಗಿನ ನನ್ನ ಪ್ರಯಾಣವು ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಯಿತು. ಈ ಪ್ರಯಾಣದ ಪುಸ್ತಕದಲ್ಲಿ ದೋಷಗಳು, ಅವುಗಳ ಮಹತ್ವವನ್ನು ವಿವರಿಸಿದ್ದಾರೆ.
ಈ ಇಡೀ ಸೃಷ್ಟಿ ಪಂಚಭೂತಗಳ ಆಧಾರದಲ್ಲಿ ನಿರ್ಮಿತವಾಗಿದೆ. ಈ ಪಂಚಭೂತಗಳು ಒಟ್ಟಾಗಿ ಮೂರು ಶಕ್ತಿಗಳನ್ನು ಸೃಷ್ಟಿಸಿದವು. ಅವುಗಳೇ ದೋಷಗಳಾದ ವಾತ, ಪಿತ್ತ, ಕಫಾ, ಇವುಗಳಲ್ಲಿ ಮೊದಲನೆಯದು ನಮ್ಮ ಶಕ್ತಿಯನ್ನು ನಿಯಂತ್ರಿಸುವುದು. ಎರಡನೆಯದು ನಮ್ಮ ಜೀರ್ಣಕ್ರಿಯೆ ಮತ್ತು ದೈಹಿಕ ಚಟುವಟಿಕೆಯನ್ನು ನೋಡಿಕೊಳ್ಳುತ್ತದೆ. ಮೂರನೆಯದು ನಮ್ಮ ಮೈಕಟ್ಟುಗಳನ್ನು ನಿರ್ದೇಶಿಸುತ್ತದೆ.ಆಯುರ್ವೇದದ ವಿಧಾನದಲ್ಲಿ ಈ ಮೂರು ದೋಷಗಳನ್ನು ಸರಿಯಾದ ಕ್ರಮದಲ್ಲಿ ಇರಿಸಿ ಮತ್ತು ನಮ್ಮ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಹೇಳಿದರು.
ನಾನು ಒಂದು ತಿಂಗಳಿನಿಂದ ಆಯುರ್ವೇದದ ಪಂಚಕರ್ಮದ ಚಿಕಿತ್ಸೆ ಪಡೆಯುತ್ತಿದ್ದೇನೆ. ಪಂಚಕರ್ಮ ಚಿಕಿತ್ಸೆ ನಮ್ಮ ಶಕ್ತಿಯನ್ನು ನಾವು ಅರಿತುಕೊಳ್ಳುವ ಮತ್ತು ನಮ್ಮನ್ನು ಗುಣಪಡಿಸುವ ಪ್ರಕ್ರಿಯೆ ಎಂದು ಹೆಬ್ಬುಲಿ ನಾಯಕಿ ಅಮಲಾ ಪಾಲ್ ಅವರು ತಾವು ಪಡೆಯುತ್ತಿರುವ ಆಯುರ್ವೇದ ಚಿಕಿತ್ಸೆ ಬಗ್ಗೆ ಹೇಳಿಕೊಂಡಿದ್ದಾರೆ.