ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನ ಆರೋಗ್ಯದಲ್ಲಿ ಗ್ಯಾಸ್ಟ್ರಿಕ್ ದೂಡ್ಡ ರೋಗವಾಗಿ ಪರಿಣಮಿಸಿದೆ. ದಿನನಿತ್ಯ ಸಾಮಾನ್ಯವಾಗಿ ಆಲೂಗಡ್ಡೆ, ಬದನೆಕಾಯಿ, ಕಡ್ಲೆಕಾಳು ಇಲ್ಲ ಕಾಬೂಲ್ ಕಡಲೆ ಸೇವನೆಯಿಂದ ಹೆಚ್ಚಿನ ಜನರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತವೆ. ಈ ಸಮಸ್ಯೆಯಿಂದಾಗಿ ಜನರು ಭಾರೀ ತೊಂದರೆ ಅನುಭವಿಸುತ್ತಾರೆ.
ಗ್ಯಾಸ್ಟ್ರಿಕ್ ತಡೆಯಲು ಹೀಗೆ ಮಾಡಿ…
1. ಅಜ್ವೈನ್ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಳವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದನ್ನು ತಡೆಯುತ್ತದೆ.
2. ಜೀರಿಗೆ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಬಹುದು.
3. ಶುಂಠಿ ಚಹಾ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
4. ಅಡಿಗೆ ಸೋಡಾ ಮತ್ತು ನಿಂಬೆ ಮಿಕ್ಸ್ ಮಾಡಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹಹುದು