ಮುಟ್ಟಿದರೆ ಮುನಿ ಗಿಡದ ಔಷಧಿಯ ಗುಣಗಳು ಮತ್ತು ಅದರ ಮಹತ್ವ

ಗಿಡಗಳು ಮನುಷ್ಯರಂತೆ ಹಲವಾರು ಚಟುವಟಿಕೆಗಳನ್ನು ಹೊಂದಿವೆ. ಉದಾಹರಣೆಗೆ ಉಸಿರಾಡುವಿಕೆ, ಶಬ್ದಗಳನ್ನು ಆಲಿಸುವಿಕೆ, ಮಾನಸಿಕ ತೊಳಲಿಕೆ ಇತ್ಯಾದಿ. ಇವೆಲ್ಲವುಗಳು ತತ್‌ಕ್ಷಣ ಗೋಚರವಿಲ್ಲದಿರುವುದು ಸತ್ಯಸಂಗತಿ. ಆದರೆ ತತ್‌ಕ್ಷಣ ಬಾಹ್ಯ ಪ್ರಪಂಚದ ತರಂಗಗಳನ್ನು ಗ್ರಹಿಸಿ ಪ್ರತಿಕ್ರಿಯೆಯನ್ನು ಹೊರಸೂಸುವ ಕೆಲವೇ…

Mimosa pudica vijayaprabha news

ಗಿಡಗಳು ಮನುಷ್ಯರಂತೆ ಹಲವಾರು ಚಟುವಟಿಕೆಗಳನ್ನು ಹೊಂದಿವೆ. ಉದಾಹರಣೆಗೆ ಉಸಿರಾಡುವಿಕೆ, ಶಬ್ದಗಳನ್ನು ಆಲಿಸುವಿಕೆ, ಮಾನಸಿಕ ತೊಳಲಿಕೆ ಇತ್ಯಾದಿ. ಇವೆಲ್ಲವುಗಳು ತತ್‌ಕ್ಷಣ ಗೋಚರವಿಲ್ಲದಿರುವುದು ಸತ್ಯಸಂಗತಿ. ಆದರೆ ತತ್‌ಕ್ಷಣ ಬಾಹ್ಯ ಪ್ರಪಂಚದ ತರಂಗಗಳನ್ನು ಗ್ರಹಿಸಿ ಪ್ರತಿಕ್ರಿಯೆಯನ್ನು ಹೊರಸೂಸುವ ಕೆಲವೇ ಕೆಲವು ಗಿಡಗಳಲ್ಲಿ ಮುಟ್ಟಿದರೆ ಮುನಿ ಅತಿ ಪ್ರಾಚೀನ ಹಾಗೂ ಚಿರ ಪರಿಚಿತ. ಈ ಗಿಡವು ಸ್ಪರ್ಷದಿಂದಾಗಿ ತನ್ನ ಬಿಡಿಸಿದ ಎಲೆಗಳನ್ನು ಕೂಡಲೇ ಮುದುರಿಕೊಳ್ಳುವುದರಿಂದ ಇದನ್ನು ಸಂಸ್ಕೃತದಲ್ಲಿ ‘ಲಜ್ಜಾಲು’ ಎಂದು ಕರೆದಿದ್ದಾರೆ.

ಬಹುಶಃ ಮಾನವನ ಲಜ್ಞಾ ಸ್ವಭಾವವು ಈ ಗಿಡದ ಪ್ರೇರಣೆಯಿಂದಲೇ ಪ್ರಾರಂಭವಾಗಿರಬೇಕು. ಈ ಗಿಡವು ಮತ್ತೊಂದು ಹೆಸರಾಂತ ಕಳೆಗಳಲ್ಲಿ ಒಂದು. ಇದು ಮುಳ್ಳಿನಿಂದ ಕೂಡಿದ್ದು ನೆಲದಲ್ಲಿ ಹರಡುವ ಗಿಡ. ಸಾಮಾನ್ಯ ಎಲ್ಲಾ ಉಷ್ಣವಲಯಗಳಲ್ಲಿ ಬೆಳೆಯುವಂತಹ ಗಿಡ. ಇದರ ಹೂಗಳು ‘ಪಿಂಕ್ ಬಣ್ಣದಿಂದ ಕೂಡಿದ್ದು ಸುಂದರವಾದ ಚಂಡಿನಂತೆ ಇರುತ್ತದೆ. ಗಿಡದ ಉಪಯುಕ್ತ ಭಾಗಗಳೆಂದರೆ ಎಲೆಗಳು.

ಮುಟ್ಟಿದರೆ ಮುನಿ ಗಿಡ ಉಪಯೋಗಗಳು

Vijayaprabha Mobile App free

1. ಎಲೆಗಳನ್ನು ತೊಳೆದು ರಸ ಹಿಂಡಿ 1-3 ಚಮಚೆಯಷ್ಟು ರಸವನ್ನು ಎಳನೀರಿನೊಂದಿಗೆ ಸೇವಿಸಿದರೆ ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ.

2. ಹೆಂಗಸರಲ್ಲಿ ಅತಿಯಾದ ಮುಟ್ಟಿನ ಸ್ರಾವಗಳಲ್ಲಿ 1 ಭಾಗ ಇಡೀ ಗಿಡಕ್ಕೆ 4 ಭಾಗ ನೀರನ್ನು ಬೆರೆಸಿ, ಕುದಿಸಿ 1 ಭಾಗಕ್ಕೆ ಇಳಿಸಿ, ಶೋಧಿಸಿ ಅದಕ್ಕೆ 1 ಚಿಟಿಕೆ ಸ್ಪಟಿಕ ಅಥವಾ ಆಲಂನ್ನು ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದರಿಂದ ರಕ್ತ ಸ್ತಂಭನವಾಗುತ್ತದೆ. ಇದನ್ನು ಗಾಯ ತೊಳೆಯಲಿಕ್ಕೆ ಸಹ ಬಳಸಬಹುದು.

3. 1 ಭಾಗ ಎಲೆಗಳಿಗೆ 2 ಭಾಗ ಕಾಯಿಸಿದ ಬಿಸಿ ನೀರನ್ನು ಹಾಕಿ ಸುಮಾರು 3 ಗಂಟೆ ಬಿಟ್ಟ ನಂತರ ಬರುವಂತಹ ಕಷಾಯವನ್ನು (3-6, ಚಮಚೆಯಷ್ಟನ್ನು) ಸೇವಿಸುವುದರಿಂದ ಮೂತ್ರದಲ್ಲಿರುವ ಕಲ್ಲು ನಿವಾರಣೆಯಾಗುತ್ತದೆ.

4. ಎಲೆಗಳನ್ನು ಹಾಲಿನಲ್ಲಿ ಅರೆದು ಅಥವಾ ಹಾಲಿನಲ್ಲಿ ಕಾಯಿಸಿ ನೀಡುವುದರಿಂದ ರಕ್ತ ಬೀಳುವ ಮೊಳೆ ರೋಗದಲ್ಲಿ ಅತ್ಯುಪಯುಕ್ತ.

ಇದನ್ನು ಓದಿ: ಔಷಧಿಯ ಗುಣದ ಗಣಿ ದೊಡ್ಡಪತ್ರೆಯ ಮಹತ್ವ ಮತ್ತು ಉಪಯೋಗ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.