ಮುಪ್ಪನ್ನು ಹೋಗಲಾಡಿಸುವ ಟೀ ಪುಡಿ:
* ಗ್ರೀನ್ ಟೀ ಬ್ಯಾಗನ್ನು ಮುಖದ ಮೇಲಿನ ಕಲೆಯ ಮೇಲೆ ಇಟ್ಟುಕೊಳ್ಳುತ್ತ ಬಂದರೆ ಚರ್ಮದ ಮೇಲಿರುವ ಕಲೆ ಮಾಯವಾಗುತ್ತದೆ.
* ಗ್ರೀನ್ ಟೀಯು ಆಂಟಿ ಆಕ್ಸಿಡೆಂಟ್ ಎಂಬ ಅಂಶವನ್ನು ಹೊಂದಿದ್ದು, ವಯಸ್ಸಾದ ಚಿಹ್ನೆಯನ್ನು ಹೋಗಲಾಡಿಸುವುದಲ್ಲದೇ, ಚರ್ಮದ ಸಮಸ್ಯೆಗಳಿಂದ ಸಹ ಮುಕ್ತಿ ನೀಡುತ್ತದೆ.
* ಕೂದಲಿಗೆ ಹೊಳಪು ನೀಡಲು ಬಯಸುವವರು ಟೀ ಬ್ಯಾಗ್ ಬಳಸಬಹುದಾಗಿದ್ದು, ಒಮ್ಮೆ ಬಳಕೆಯಾದ ಟೀ ಬ್ಯಾಗನ್ನು ನಾಲ್ಕೈದು ಕಪ್ ನೀರಿನೊಂದಿಗೆ ಮತ್ತೆ ಕುದಿಸಿ, ನೀರು ತಣ್ಣಗಾದ ನಂತರ ತಲೆಗೆ ಹಚ್ಚಿಕೊಂಡರೆ ಕೂದಲಿನ ಹೊಳಪು ಹೆಚ್ಚಾಗುತ್ತದೆ.
ಸುಂದರವಾಗಿ ಕಾಣಲು ಈ ಟಿಪ್ಸ್ ಪಾಲಿಸಿ:
* ಬಾದಾಮಿ, ಪಿಸ್ತಾ ಮತ್ತು ಅಂಜೂರ ಹಣ್ಣನ್ನು ಸೇವಿಸಿರಿ.
* ಪ್ರತಿದಿನ ಕನಿಷ್ಠ 6 ರಿಂದ 8 ಲೋಟ ನೀರು ಕುಡಿಯಿರಿ. ಜೊತೆಗೆ ಪ್ರತಿದಿನ ಎಳನೀರು ಸೇವಿಸಿರಿ.
* ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸಿ. ಸಾಧ್ಯವಾದರೆ, ಅದರ ಸೂಪ್ ಅನ್ನು ಸಹ ಕುಡಿಯಿರಿ. ನಿರ್ದಿಷ್ಟವಾಗಿ, ಟೊಮೆಟೊ & ಪಾಲಕ್ ಸೊಪ್ಪನ್ನು ಸೇವಿಸಿರಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment