ಇತ್ತೀಚಿನ ವರ್ಷಗಳಲ್ಲಿ ಯುವಜನತೆಯೂ ಸೇರಿ ವಯಸ್ಕರು ಕೂಡ ಡಯೆಟ್ ಹಿಂದೆ ಬಿದ್ದಿದ್ದು ರಾತ್ರಿ ಊಟ ಮಾಡದೆ ಮಲಗುವುದು ಅಥವಾ ಚಪಾತಿ, ಹಣ್ಣು, ಲಘು ಉಪಹಾರ ಸೇವಿಸಿ ಮಲಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.
ಆದ್ರೆ ಇದರಿಂದ ಅವರಿಗೆ ಪ್ರಯೋಜನವಾಗುವುದಿಲ್ಲ ಎಂದರೆ ತಪ್ಪಾಗಲಿದೆ. ಆದ್ರೆ ಪ್ರಯೋಜನಕ್ಕಿಂತ ಮುಖ್ಯವಾಗಿ ಅದರ ವ್ಯತಿರಿಕ್ತ ಪರಿಣಾಮವೂ ಎದುರಿಸಬೇಕಾಗುತ್ತದೆ. ನಾವು ರಾತ್ರಿಯ ಊಟವನ್ನು ಬಿಟ್ಟರೆ ಹತ್ತಾರು ಸಮಸ್ಯೆ ಕಾಡಲಿದೆ.
ಹೌದು, ರಾತ್ರಿ ಊಟ ಬಿಡುವುದರಿಂದ ನಮ್ಮ ಅರಿವಿಗೆ ಬಾರದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡಲಿದ್ದು, ದೇಹದಲ್ಲಿ ಒತ್ತಡದ ಹಾರ್ಮೋನುಗಳ ಪ್ರಮಾಣವು ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ಡಯೆಟ್ನಲ್ಲಿರುವವರು ನಿದ್ರಾಹೀನತೆ ಎದುರಿಸುತ್ತಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ.
ಇನ್ನು, ರಾತ್ರಿ ಊಟ ಬಿಡುವುದು ಭವಿಷ್ಯದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಡಬಹುದಾಗಿದ್ದು, ಜೊತೆಗೆ ಹೊಟ್ಟೆಯ ಹುಣ್ಣು, ತೂಕ ಇಳಿಕೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.